Showing posts with label Trekking. Show all posts
Showing posts with label Trekking. Show all posts

Sunday, January 28, 2018

ತಿರುಗಾಟದ ಚಿತ್ರಗಳು-25


      ನನ್ನ ಗೆಳೆಯನ ಜೊತೆಗೆ 2018 ರ ಜನವರಿ 26 ರಂದು ರಾಜ್ಯೋತ್ಸವದ ದಿನ ಮುಂಜಾನೆ ಬೆಂಗಳೂರಿನ ಮತ್ತಿಕೆರೆಯಿಂದ ದ್ವಿಚಕ್ರ ವಾಹನದಲ್ಲಿ  ಹೊರಟು ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿನ ಮಧುಗಿರಿ ಕೋಟೆಯನ್ನು ಚಾರಣಿಸಿ ಬಂದೆವು. ತುಂಬಾ ದಿನಗಳ ನಂತರ ಬೈಕಿಂಗ್ ಹಾಗು ಚಾರಣವನ್ನು ಮಾಡುವ ಅವಕಾಶವು ಸಿಕ್ಕಿತ್ತು. 
ಮಧುಗಿರಿ ಬೆಟ್ಟವು ಏಕಶಿಲಾ ಬೆಟ್ಟವಾಗಿದ್ದು, ಏಷ್ಯಾದಲ್ಲಿಯೇ ಎರಡೆನೆಯ ದೊಡ್ಡ ಬೆಟ್ಟವಾಗಿದೆ. ಮಧುಗಿರಿ ಕೋಟೆಯನ್ನು ಸುಮಾರು 1600 ದಶಕದ ಕೊನೆಯಲ್ಲಿ ಗಂಗರ ಸಾಮ್ರಾಜ್ಯದ ರಾಜ ಹೀರೆ ಗೌಡರು ಕಟ್ಟಿಸಿದರು ಎಂದು ಇತಿಹಾಸವು ಹೇಳುತ್ತದೆ. ಆ ನಂತರ ಸುಮಾರು ರಾಜ ವಂಶಗಳು ಇದನ್ನು ಆಳ್ವಿಕೆ ಮಾಡಿದರು. 
    ಮಧುಗಿರಿ ಎಂದರೆ ಜೇನು ಬೆಟ್ಟ ಅರ್ಥವು ಇದೆ. ಬೆಂಗಳೂರಿನಿಂದ ಸುಮಾರು 100 ಕಿ.ಮೀ ಗಳ ದೂರದಲ್ಲಿ ಮಧುಗಿರಿ ಕೋಟೆಯಿದೆ. 
      ಬೆಟ್ಟದ ಮೇಲಿನ ಕೋಟೆ ಹಾಗು ಅಲ್ಲಿ ಕಟ್ಟಿರುವ ಕಟ್ಟಡಗಳನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಯಾಕಂದರೆ ಕೆಲವೊಂದು ಕಡೆ ಬೆಟ್ಟವನ್ನು ಎರಡು ಕಾಲುಗಳಲ್ಲಿ ಹತ್ತಲು ಅಸಾಧ್ಯವಾಗಿದೆ. ಅಂತಹ ಸನ್ನಿವೇಶದಲ್ಲಿ ಅಷ್ಟೆಲ್ಲ ಸಾಮಾಗ್ರಿಗಳನ್ನು ಬೆಟ್ಟದ ಮೇಲೆ ತಂದು ಕಟ್ಟಡಗಳನ್ನು ಕಟ್ಟಿರುವುದನ್ನು ನೋಡಿದಾಗ ಸಾಮಾನ್ಯರಿಗೆ ಇದೆಲ್ಲ ಸಾಧ್ಯವಿಲ್ಲ ಅನಿಸುತ್ತದೆ. 
     ಈ ಕೋಟೆಯು ಈಗ ಸರಿಯಾದ ರಕ್ಷಣೆಯಿಲ್ಲದೆ ಜೀರ್ಣಾವಸ್ಥೆಗೆ ಸರಿಯುತ್ತಿದೆ. ಸಂಬಂಧ ಪಟ್ಟ ಇಲಾಖೆಯು ಈ ಬಗ್ಗೆ ಗಮನ ಹರಿಸಿದಲ್ಲಿ ಕೋಟೆಯನ್ನು ಹಾಗು ಇತಿಹಾಸವನ್ನು ಉಳಿಸಿಕೊಳ್ಳಬಹುದು. ಅದೇ ರೀತಿ ಬೆಟ್ಟ ಹತ್ತಲು ಬರುವ ನಾಗರೀಕರು ತಿಂದು, ಕುಡಿದ ಪ್ಲಾಸ್ಟಿಕ್, ಬಾಟಲ್ ಹಾಗು ಇತರೇ ತ್ಯಾಜ್ಯಗಳನ್ನು ಕಂಡಲ್ಲಿ ಬಿಸಾಕಿರುತ್ತಾರೆ. ಈ ಬಗ್ಗೆ ಜನರು ಹಾಗು ಸಂಬಂಧಪಟ್ಟ ಇಲಾಖೆಗಳು ಕೋಟೆಯ ಒಳಗೆ, ಸುತ್ತಮುತ್ತ ಕಸ ಬಿಸಾಕದಂತೆ ಕ್ರಮಕೈಗೊಳ್ಳುವುದು ಸೂಕ್ತ. ತಪ್ಪಿದಲ್ಲಿ ಕೋಟೆ ಪೂರ್ಣ ಕಸದ ತೊಟ್ಟಿಯಾಗುತ್ತದೆ.  
       ಚಾರಣದ ಕೆಲವು ಚಿತ್ರಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.



ಮಧುಗಿರಿ ಪೇಟೆಯಿಂದ ಕಾಣುವ ಮಧುಗಿರಿ ಬೆಟ್ಟದ ಒಂದು ನೋಟ.






ಬೆಟ್ಟದ ಒಂದು ಇಳಿಜಾರಿನಲ್ಲಿ ಕಾಣುವ ಮಧುಗಿರಿಯ ಚಿತ್ರ.





ತೀರ ಕ್ಲಿಷ್ಟವಾದ ಬೆಟ್ಟ ಹತ್ತುವ ಹಾಗು ಇಳಿಯುವ ಸ್ಥಳ. ಇಲ್ಲಿ ಎರಡು ಕಾಲುಗಳಲ್ಲಿ ಹತ್ತುವುದು, ಇಳಿಯುವುದು ಕಷ್ಟ ಸಾಧ್ಯ. 






ರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿ ಬೆಟ್ಟ ಹತ್ತಲು ಬಂದ ಪೋರರು, ಹಾಗೆ ಪೋಟೋಗೆ ಒಂದು ಪೋಸು.


ಬೆಟ್ಟದ ಒಂದನೇ ಹಂತದಲ್ಲಿರುವ ಕಾವಲು ಕಾಯುತ್ತಿದ್ದ ಸ್ಥಳ. ಅದರ ಕೆಳಗೆ ನೀರಿನ ದೊಡ್ಡ ಹೊಂಡವಿದೆ.






ಬೆಟ್ಟದ ಮೂರನೇ ಹಂತದಿಂದ ಕ್ಯಾಮರ ಕಣ್ಣಿಗೆ ಕಂಡ ವಿಹಂಗಮ ನೋಟ


ಬೆಟ್ಟದ ತುದಿಯಲ್ಲಿ ಕಟ್ಟಿರುವ ಕೋಟೆಯ ಚಿತ್ರ.


ಒಂದು ದಿನದ ಬೈಕಿಂಗ್ ಹಾಗು ಚಾರಣ ಮುಗಿಸಿ ಮಧ್ಯಾಹ್ನದ ಹೊತ್ತಿಗೆ ಮತ್ತೆ ಬೆಂಗಳೂರನ್ನು ಸೇರಿಕೊಂಡೆವು. 
ಮಾಹಿತಿ:
1. ಸ್ಥಳ: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣ
2. ಬೆಂಗಳೂರಿನಿಂದ ದೂರ: ಸುಮಾರು 100 ಕಿ.ಮೀ. ಬೆಂಗಳೂರಿನಿಂದ ತುಮಕೂರು ರಸ್ತೆಯಲ್ಲಿ ದಾಬಸ್ ಪೇಟೆಯಲ್ಲಿ ಬಲಕ್ಕೆ ಸುಮಾರು 58 ಕೀ.ಮಿ. ಪ್ರಯಾಣ.
3. ಭೇಟಿ ನೀಡಲು ಸರಿಯಾದ ಸಮಯ: ಬೆಳಗ್ಗೆ ಸುಮಾರು 6.30-7.00 ಗಂಟೆಗೆ ಬೆಟ್ಟ ಹತ್ತಲು ಸರಿಯಾದ ಅವಧಿ. ಬಿಸಿಲಿನಲ್ಲಿ ಬೆಟ್ಟ ಹತ್ತಲು ಕಷ್ಟ.
4. ಬೆಟ್ಟದಲ್ಲಿ ನೀರಿನ ಹಾಗು ಉಪಹಾರದ ವ್ಯವಸ್ಥೆಯಿರುವುದಿಲ್ಲ.
5. ತಿಂದು, ಕುಡಿದ ಪ್ಲಾಸ್ಟಿಕ್/ಬಾಟಲಿ ಮುಂತಾದ ಸೂಕ್ತ ಸಮಯದಲ್ಲಿ ಪ್ರಕೃತಿಯಲ್ಲಿ ಕರಗದ ಯಾವುದೇ ತ್ಯಾಜ್ಯಗಳನ್ನು ಬೆಟ್ಟ ಹಾಗು ಸುತ್ತ ಮುತ್ತ ಬಿಸಾಕದ ಹಾಗೆ ಮುತ್ತುವರ್ಜಿವಹಿಸಿಕೊಳ್ಳುವುದು ಚಾರಣಿಗರ/ಪ್ರವಾಸಿಗರ ಜವಾಬ್ದಾರಿ.

Monday, September 18, 2017

ಬೈಕಿಂಗ್ ಮತ್ತು ಆವಲಬೆಟ್ಟ ಚಾರಣ

ಬೆಂಗಳೂರು ನಗರದಿಂದ ಸುಮಾರು 90 ಕಿ.ಮೀ ದೂರವಿರುವ ಚಿಕ್ಕ ಬಳ್ಳಾಪುರ ದ ಹತ್ತಿರ ಇರುವ ಪ್ರೇಕ್ಷಣಿಯ ಸ್ಥಳ ಆವಲ ಬೆಟ್ಟ. ಬೈಕಿಂಗ್ ಹಾಗೂ ಚಾರಣಕ್ಕೆ ಒಳ್ಳೆಯ ಆಯ್ಕೆ. ನಾವು ಹೊರಟ ದಿನ ಬೆಳಿಗ್ಗೆ ತುಂಬಾ ಜೋರಾಗಿ ಮಳೆ ಸುರಿದಿತ್ತು. ಮಳೆಯಲ್ಲಿ ದೂರ ದಾರಿ ಬೈಕ್ ಓಡಿಸುವುದು ನನಗೆ ಖುಷಿ.  
ಚಿಕ್ಕ ಬಳ್ಳಾಪುರ ರಸ್ತೆಯಲ್ಲಿ ಹೊರಟ ನಾವು ದೇವನಹಳ್ಳಿಯಲ್ಲಿ ಬೆಳಗ್ಗಿನ ಉಪಹಾರ ಸೇವಿಸಿ ಪಯಣ ಮುಂದುವರೆಸಿದೆವು. 


 
ಬೆಟ್ಟದ  ಮೇಲೆ ಇರುವ ಶ್ರೀ ಧೇನು ಲಕ್ಷ್ಮೀ ನರಸಿಂಹ ದೇವಸ್ಥಾನ.
 
 ಬೆಟ್ಟದ ತುದಿಯಿಂದ ಕಾಣುವ ವಿಹಂಗಮ ನೋಟ.







ವಾಪಾಸು ಹೊರಟ ನಾವು ದೇವನಹಳ್ಳಿಯಲ್ಲಿ ಊಟ ಮಾಡಿ ಬೆಂಗಳೂರಿಗೆ ಬರುತ್ತ ಧಾರಾಕಾರ ಗಾಳಿ ಮಳೆ. ಮಳೆಯಲ್ಲಿ ಮನೆ ಸೇರಿದೆ.

Friday, April 14, 2017

ಮಲೆನಾಡಿನ ಮರೆಯಲಾರದ ಕವಳೆ ದುರ್ಗ ಕೋಟೆ

ಪರಿಚಯ: ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ ದೂರದಲ್ಲಿ ದಟ್ಟ ಅರಣ್ಯದೊಳಗೆ ಮರೆಯುವ ಅಂಚಿನಲ್ಲಿರುವ ಕವಳೆ ದುರ್ಗ ಕೋಟೆಯು ಇದೆ. ಸುಮಾರು 9ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ, ಮುಂದೆ ಸ್ವತಂತ್ರ ಆಡಳಿತಗಾರರಾದ ಕೆಳದಿಯ ವೆಂಕಟಪ್ಪ ನಾಯಕರಿಂದ ನಿರ್ಮಿಸಲ್ಪಟ್ಟ ಕವಳೆದುರ್ಗ ಕೋಟೆಯು, ಭುವನಗಿರಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಬೃಹತ್ ಕಪ್ಪು ಕಲ್ಲುಗಳಿಂದ ನಿರ್ಮಿಸಲ್ಪಟ್ಟ ಮೂರು ಸುತ್ತಿನ ಈ  ಕೋಟೆಯಾಗಿದೆ. ಕೆಳದಿಯ ನಾಯಕರಿಂದ ನಿರ್ಮಾಣವಾದ ಸುಂದರ ಹಾಗು ಶತ್ರುಗಳಿಂದ ಸುಲಭವಾಗಿ ನುಗ್ಗಲು ಅಸಾಧ್ಯವಾದ ಗಟ್ಟಿ ಮುಟ್ಟಾದ ಕೋಟೆಯ ಒಳಗೆ ಮನೋಹರ ವಾಸ್ತುಶಿಲ್ಪಗಳಿಂದ ನಿರ್ಮಿತವಾದ ಅರಮನೆಯ ಕುರುಹುಗಳು, ದೇವಸ್ಥಾನಗಳು, ಮುರಿದುಬಿದ್ದ ಆನೆ, ಕುದುರೆ ಲಾಯಗಳು, ಫಿರಂಗಿ, ಶಸ್ತ್ರ ಭಂಡಾರ ಹಾಗು ವ್ಯವಸ್ಥಿತವಾಗಿ ನಿರ್ಮಿತವಾದ ನೀರಿನ ಕೊಳಗಳ ಕುರುಹುಗಳನ್ನು ಕಾಣಬಹುದು. 

ಅರಣ್ಯದಿಂದ ಆವೃತವಾದ ಇತಿಹಾಸದಲ್ಲಿ ಹುದುಗಿ ಹೋಗುತ್ತಿರುವ ಕವಳೆದುರ್ಗ ಕೋಟೆಯ ನೋಟ

ಕೋಟೆಗೆ ಹೋಗಲು ನಿರ್ಮಿಸಿದ ಅಗಲ ರಸ್ತೆ.


ಕೋಟೆಯ ಮುಖ್ಯ ದ್ವಾರದಲ್ಲಿರುವ ಬೃಹತ್ ಕಾವಲು ಗೋಪುರ.









ಕೋಟೆಯ ಕಲ್ಲು ಗೋಡೆಗಳಲ್ಲಿ ಕೆತ್ತಿರುವ ವಾಸ್ತುಶಿಲ್ಪಗಳು

ಕೋಟೆಯ ಬಗ್ಗೆ ಮಾಹಿತಿ ನೀಡುತ್ತಿರುವ ಗೈಡ್.




ಕೆಳದಿಯ ನಾಯಕರು ಪೂಜಿಸುತ್ತಿದ್ದ ನಾಗ ದೇವರ ಕಲ್ಲುಗಳು. ನಾಗದೇವರುಗಳು ಕೋಟೆಯನ್ನು ಹೊರಗಿನ ಶತ್ರುಗಳಿಂದ ರಕ್ಷಿಸುತ್ತಿದ್ದರೆಂಬ ಪ್ರತೀತಿ. ಕರಾವಳಿ ಹಾಗು ಮಲೆನಾಡ ಕೆಲಭಾಗಗಳಲ್ಲಿ ನಾಗದೇವರ ಆರಾದನೆ ಈಗಲೂ ಸಾಮಾನ್ಯ.
















ದೇವಾಲಯದ ಗೋಡೆಗಳ ಮೇಲೆ ಕೆತ್ತಲ್ಪಟ್ಟ ಯುದ್ದದ ಕೆತ್ತನೆಗಳು





ಬಳಸುತ್ತಿದ್ದ ಬೀಸು ಕಲ್ಲು







ಕೋಟೆಯೊಳಗೆ ಕಪ್ಪು ಕಲ್ಲು ಶಿಲೆಯಲ್ಲಿ ಕೆತ್ತಿರುವ ಶಾಸನ



ಕಪ್ಪು ಕಲ್ಲು ಬಂಡೆಯೊಳಗೆ ನಿರ್ಮಿಸಿದ ನೀರಿನ ಸಂಪು. ಅಂದಿನ ಕಾಲದಲ್ಲಿ ನೀರಿನ ಸಮಗ್ರ ನಿರ್ವ



ಮುಚ್ಚಿಗೆಯ ಬಾವಿ


ಅರಮನೆ ಹಾಗು ಇತರೇ ಬಳಕೆಗಾಗಿ ನೀರಿನ ಮೂಲಗಳಿಂದ ನೀರು ಸರಬರಾಜಿಗಾಗಿ ಮಾಡಿದ್ದ ವ್ಯವಸ್ಥೆ.   ಪೈಪು ವ್ಯವಸ್ಥೆ ಇಲ್ಲದ  ಕಾಲದಲ್ಲಿ ನೀರು ಪೂರೈಕೆಯನ್ನು ವ್ಯವಸ್ಥಿತವಾಗಿ ಮಾಡಿಕೊಂಡಿರುವುದನ್ನು ನಾವು ಕಾಣಬಹುದು.


ಕಾಳುಮೆಣಸು ಬೆಳೆಯು ಕೆಳದಿ ಸಂಸ್ಥಾನದ ವಾಣಿಜ್ಯ ಬೆಳೆಯಾಗಿದ್ದನ್ನು ನಾವು ಕೋಟೆಯ ಸುತ್ತಲೂ ಹರಡಿರುವ ಕಾಳು ಮೆಣಸು ಗಿಡಗಳಿಂದ ಕಾಣಬಹುದು.




ಅರಮನೆಯಲ್ಲಿ ಬಳಸುತ್ತಿದ್ದ ಸ್ನಾನದ ತೊಟ್ಟಿ.

ಅರಮನೆಯ ಕುರುಹಿನ ಚಿತ್ರಗಳು. ವ್ಯವಸ್ಥಿತ ವಾದ ಅಡುಗೆ ಒಲೆಗಳು, ಸ್ನಾನಗೃಹ, ತೊಟ್ಟಿಗಳು, ನೀರು ಪೂರೈಕೆ ವ್ಯವಸ್ಥೆಗಳು, ಕೋಣೆಗಳನ್ನು ಇಲ್ಲಿ ಗಮನಿಸಬಹುದು.




ಕಪ್ಪು ಕಲ್ಲಿನಿಂದ ನಿರ್ಮಿಸಿದ ಪಂಚ ಜ್ವಾಲೆಗಳ ಒಂಟಿ ಒಲೆಯು ಈ ಅರಮನೆಯಲ್ಲಿನ ಅಡುಗೆ ಕೋಣೆಯಲ್ಲಿ ಬಳಸಿದ ನೈಪುಣ್ಯತೆಯನ್ನು ಕಾಣಬಹುದು.
ಮಸಾಲೆ ಕಡಿಯುವ ಕಲ್ಲು


ತೊಟ್ಟಿ

ರಾಜ, ರಾಣಿಯರ ಸ್ನಾನದ ಕರೆ
ಉತ್ಖನಗೊಂಡ ನಂತರ ಕಾಣಿಸುತ್ತಿರುವ ಅರಮನೆಯ ಕುರುಹುಗಳು


ಕೋಟೆಯ ಮೇಲಿನಿಂದ ಕಾಣುವ ಪಶ್ಚಿಮ ಘಟ್ಟದ ನೋಟ.

ಕೋಟೆಯ ಮೇಲಿನಿಂದ ಕಾಣುವ ಮತ್ತೊಂದು ರಮಣೀಯ ನೋಟ.

ಶಸ್ತ್ರಗಾರ

ಏಕಶಿಲೆಯ ಮೇಲೆ ನಿರ್ಮಿಸಿದ ಗೋಪುರ
ಶಿವಲಿಂಗ


ನೀರಿನ ತೊಟ್ಟಿ


ಸ್ನಾನ ತೊಟ್ಟಿ ಹಾಗು ಫಿರಂಗಿಯ ಉಳಿಕೆ

ನೀರು ಸಂಗ್ರಹಗಾರ


ಅಪೂರ್ವ ವಾಸ್ತುಶಿಲ್ಪ ಕೆತ್ತನೆಗಳಿರುವ ಕಪ್ಪು ಶಿಲಾ ಕಟ್ಟಡಗಳು ನೋಡಲು ಸುಂದರವಾಗಿದೆ.

ಕೊನೆಯದಾಗಿ: ಕೆಳದಿಯ ನಾಯಕರು ನಿರ್ಮಿಸಿದ ಅಮೋಘ ಕವಳೆದುರ್ಗ ಕೋಟೆಯು ಇಲಾಖೆಯ ನಿರ್ಲಕ್ಷ್ಯದಿಂದ ಕಾಲನ ಗರ್ಭದೊಳಗೆ ಮೆಲ್ಲನೆ ಮರೆಯಾಗುತಿರುವುದು ವಿಷಾದನೀಯ. ಕೋಟೆಯನ್ನು ಸಮಗ್ರವಾಗಿ ನಿರ್ವಹಣೆ ಹಾಗು ಸಮರ್ಪಕ ಉತ್ಖನ ಕಾರ್ಯಗಳಿಂದ ಅರಣ್ಯ ಗರ್ಭದೊಳಗೆ ಹುದುಗಿರುವ ಸತ್ಯಗಳು ಹಾಗು ಕೆಳದಿಯ ನಾಯಕರ ಇತಿಹಾಸ ಪ್ರಪಂಚಕ್ಕೆ ತಿಳಿಯಬಹುದೇನೋ.

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...