Monday, January 28, 2013

ತೆಂಗಿನಮರಗಳ ದ್ವೀಪ - ಸೈಂಟ್ ಮೇರಿ ದ್ವೀಪ

ತೆಂಗಿನಮರಗಳ ದ್ಡೀಪಕ್ಕೆ ಹೋಗಲು ಬೋಟ್ ಹತ್ತುವ ಸ್ಥಳ- ಮಲ್ಪೆ ಹಾರ್ಬರ್.  ಜೊತೆಯಲ್ಲಿ ಬಾಯಿ ತಂಪಿಗೆ ಐಸ್ ಕ್ಯಾಂಡಿ.

ಬೇಟೆಗಾಗಿ ಹೊಂಚುಹಾಕುತ್ತೀರುವ ಕೊಕ್ಕರೆ. ಚಿತ್ರ ಮಲ್ಪೆ ಹಾರ್ಬರ್ನಲ್ಲಿ


ತೆಂಗಿನಮರಗಳ ದ್ಡೀಪ - ಹೆಸರಿಗೆ ತಕ್ಕಂತೆ ದ್ವೀಪದ ತುಮಬಾ ಇರುವ ತೆಂಗಿನಮರಗಳು. ಪುಣ್ಯಕ್ಕೆ ಮಂಗಗಳ ಹಿಡಿತದಿಂದ ಪಾರಾದ ತೆಂಗಿನಮರಗಳು. ಮಲ್ಪೆ ಹಾರ್ಬರ್ ನಿಂದ ದ್ಡೀಪಕ್ಕೆ ಸುಮಾರು 20 ನಿಮಿಷಗಳ ಸಮುದ್ರ ಪಯಣ ಇದೆ. ಪಯಣದುದ್ದ ಹಾರುವ ಮೀನು ಹಾಗು ಡಾಲ್ಪಿನ್ ಕಾಣಲು ಸಿಗಬಹುದು. ಈ ಸಲ ನನಗೆ ಹಾರುವ ಮೀನು ಹಾಗು ಡಾಲ್ಪಿನ್ ನೋಡುವ ಭಾಗ್ಯ ಸಿಕ್ಕಿತು, ಆದರೆ ಪೋಟೋ ಕ್ಲಿಕ್ಕಿಸಲಾಗಲಿಲ್ಲ.

ಸ್ಪಟಿಕ ನೀರು ತೆಂಗಿನಮರಗಳ ದ್ವೀಪದ ಸೊಬಗಲ್ಲೊಂದು. ನೀರಿಗಿಳಿಯಲು ಸಖತ್ ಮಜಾ ಅಗಿರತ್ತೆ. ಸೂರ್ಯನ ರಶ್ಮಿಗೆ ನೀರು ಸ್ಪಟಿಕದಷ್ಟು ಪಳಪಳ.

ತೆಂಗಿನಮರಗಳ ದ್ವೀಪ ಅತ್ಯಾಕರ್ಷಕ ಕಲ್ಲುಗಳ ದ್ವೀಪ.

ಹಲಸಿನ ಹಣ್ಣಿನ ಮೇಲ್ಮೈನಂತಿನ ರಚನೆಯ ಕಲ್ಲುಗಳು ಅಚ್ಚರಿಯನ್ನು ಮೂಡಿಸುವುದರಲ್ಲಿ ಮೋಸಮಾಡುವುದಿಲ್ಲ.

ಅತ್ಯಾಕರ್ಷಕ ರಚನೆಯ ಕಲ್ಲುಗಳ ರಚನೆ. ಇಲ್ಲಿನ ವೈಶಿಷ್ಟ್ಯ.

ತೆಂಗಿನಮರದ ದ್ವೀಪ ಪ್ರೇಮಿಗಳ ಸ್ವರ್ಗ. ದ್ವೀಪದ ತುಂಬಾ ಪ್ರೇಮಿಗಳ ಕಲರವ.


ಸ್ಪಟಿಕ ಸ್ವಚ್ಚವಾದ ನೀರಿಗಿಳಿದು ಮನಸ್ಸೊಇಚ್ಚೆ ನೀರಾಟವಾಡಲು ಪ್ರಶಸ್ತ ತಾಣ ಇದು.

ಬದುಕು ಹೀಗೆನೆ... ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದು.

ಚಾರ್ಮಾಡಿಯ ಬೆಟ್ಟಗಳೊಳಗೊಂದು ಸುತ್ತು.

ಚಾರ್ಮಾಡಿಯೆ ಹಾಗೆ... ಒಳಹೊಕ್ಕಿದಷ್ಟು ಗಮ್ಯವಾಗೆ ಉಳಿಯುವ ಅಚಲೆ. ಅಮೋಘ ಪ್ರಕೃತಿ ಸೌಂದರ್ಯವನ್ನು ಒಡಲೊಲ್ಲಡಗಿಸಿದ ಚತುರೆ. ಅದಕ್ಕೊಂದು ಉದಾಹರಣೆ ಈ ಚಿತ್ರ.


ಸೂರ್ಯ ಪೂರ್ವದ ದಾರಿಗೆ ಅಡಿಯಿಡುವ ಮುಂಚೆಯೇ ಚೀಲವನ್ನು ಹದೆಗೇರಿಸಿ ಹೊರಟ ನಾವು ಬೆಳಗು ರಂಗೇರುವ ಮುಂಚೆಯೆ ಬೆಟ್ಟಗಳ ತುದಿಯಲ್ಲಿ ನಡೆಯಲು ಶುರುಹಚ್ಚಿಕೊಂಡೆವು.

ಪಶ್ಚಿಮಘಟ್ಟಗಳ ಬೆಟ್ಟಸಾಲುಗಳೇ ಹಾಗೆ, ಮೋಹಕ, ಮನೋಹರ, ರುದ್ರ ರಮಣೀಯ... ನೋಡಿದಷ್ಟು ರಮಣೀಯ, ಮೋಹಿಸಿದಷ್ಟು ಮೋಹಕ. ನಡೆದಷ್ಟೂ ಚಂಚಲ.

ಬೆಟ್ಟಗಳ ಹಿಂದೊಂದು ಬೆಟ್ಟಗಳ ಮೆರವಣಿಗೆ... ಟೋಪಿ ಹಾಕಿದ ಬೆಟ್ಟ, ಟೋಪಿ ಹಾಕಿಸುವ ಬೆಟ್ಟ, ಬೆಟ್ಟಗಳ ನಡುವೆ... ಮತ್ತೇರಿಸಿ ಮರೆಯಾಗಿಸುವ ಶೋಲಾ ಅರಣ್ಯ. ಬನ್ ನಡುವಿಂದಿಣುಕುವ ಜಾಮ್ ನ ಹಾಗೆ.

ಜನವರಿಯ ಚಳಿಗೆ ಬೆಳಗ್ಗಿನ ಬಿಸಿಲಿಗೆ ಬೆಟ್ಟಗಳ ತುದಿಯಲ್ಲಿ ನಡೆಯುವುದೇ ಮನಸ್ಸಿಗೆ ಆನಂದ, ಅಹ್ಲಾದ! ರೆಡ್ ರೋಸ್ ಚಾ ಕುಡಿದಂತೆ. ಪ್ರಾಣಿಗಳು ನಡೆದಾಡುವ ಹಾದಿಯೆ ನಮಗೆದುರು.

ಟೋಪಿವಾಲ ಬೆಟ್ಟ ಅಂಟಿಕೊಂಡ ಶೋಲಾ ಅರಣ್ಯ

ಚಾರ್ಮಾಡಿಯ ಪ್ರದೇಶಗಳನ್ನು ಗುರುತಿಸುತ್ತಿರುವ ಕಾಮತರು ಜೊತೆಯಲ್ಲಿ ರಾಕೇಶ್ ಹಾಗು ಸುದೀರ್. ಕಾಮತರ ಜೋಕುಗಳು ಜೊತೆಯದ್ದವರಿಗೆ ನಗೆಬುಗ್ಗೆಗಳು.

ಗಿಡುಗಬೆಟ್ಟ - ಬೇಟೆಗಾಗಿ ಹಾತೊರೆಯುತ್ತಿರುವ ಗಿಡುಗ.

ಮಾಯಾ ಬೆಟ್ಟಗಳು... ಒಂದರಹಿಂದೊಂದು ಅಡಗಿಕುಳಿತಿರುವ ನೋಟ. ನಡೆದಷ್ಟು ಮುಗಿಯದ ಹಾದಿ.
ಮಂಜಿನಹೊದಿಕೆಯೊಳಗಿನ ಬೆಟ್ಟ

ಶೋಲಾ ಅರಣ್ಯದಲ್ಲಿ ಕಾಣಸಿಗುವ ಸುಂದರ ಪುಪ್ಪಗಳಲ್ಲೊಂದು. ಪಶ್ಚಿಮಘಟ್ಟಗಳು ಅಮೋಘ ಪುಪ್ಪಗಳ ಉದ್ಯಾನ.

600 ಕಿ.ಮೀ ಬೈಕಿಂಗ್ : ಮುಲ್ಕಾಜಮಾಡ - ಮಾನಂತವಾಡಿ


ದಕ್ಷಿಣ ಕೊಡಗಿಗೆ ತಾಗಿಗೆಕೊಂಡಿರೊ ಉತ್ತರ ಕೇರಳದ ವಯನಾಡು  ದಟ್ಟ ಕಾಡಿನಿಂದಾವೃತವಾದ ಸುಂದರ ಜಿಲ್ಲೆ. ಕೇರಳದ ಅದಷ್ಟೂ ಮೃಗ ಪಕ್ಷಿಗಳು ಅಲ್ಲಿ ಸೇರಿರುವಂತಿದೆ. ಹಾದಿಗಂಟವಾಗಿ ಪ್ರಾಣಿಗಳು ಸಿಗುತ್ತಲೇ ಇರುತ್ತವೆ. ಆದರೆ ಸಾವದಾನವಾಗಿ ಶಬ್ದಮಾಡದೆ ವಾಹನ ಚಲಾಯಿಸುವುದು ಅಗತ್ಯ. ವಯನಾಡು ರೇಂಜ್ ಬೈಕಿಂಗೆ ಹೇಳಿಮಾಡಿಸಿದ ಪ್ರದೇಶ


ತೋಳ್ಪಟ್ಟಿ - ನಾಗರಹೊಳೆ ಅಭಯಾರಣ್ಯಕ್ಕೆ ಅಂಟಿಕೊಂಡಿರೊ ವಯನಾಡಿನ ಮತ್ತೋಂದು ಅಭಯಾರಣ್ಯ. ಸಫಾರಿ ಮಾಡಲು ಅನುಕೂಲವಿದೆ. ನಿಮ್ಮ ಲಕ್ ಚೆನ್ನಾಗಿದ್ದರೆ ಪ್ರಾಣಿಗಳು ಲುಕ್ ಕೊಡೊದರಲ್ಲಿ ಸಂಶಯವಿಲ್ಲ
.
ಹಾದಿ ಬದಿಯಲ್ಲಿ ಸಿಗುವ ಪ್ರಾಣಿಗಳಲ್ಲಿ ಜಿಂಕೆಗಳು ಸಾಕಷ್ಟು. ತಾಳ್ಮೆ ಅವಶ್ಯಕ ಹಾಗು ಕಾಡಿನ ಸೌಂದರ್ಯವನ್ನು ಅನುಭವಿಸುವ ಉದಾರತೆ ಮಾತ್ರ ಬೇಕೆಬೇಕು. ಈ ಹಾದಿಯ ಬೈಕಿಂಗ್ ಮನಸ್ಸಿಗೆ ಮುದವನ್ನುಕೊಡೊದರಲ್ಲಿ ಮೋಸವಿಲ್ಲ.






.
ತಿರುನೆಲ್ಲಿ - ಬ್ರಹ್ಮಗಿರಿ ಬೆಟ್ಟದ ತಪ್ಪಲಲ್ಲಿರುವ ದೇವಸ್ಥಾನವು ವಿಷ್ಣು ದೇವರ ಸನ್ನಿಧಾನ. ಮನಮೊಹಕ ವೀಕ್ಷಣೆ ಇಲ್ಲಿಂದ ಸಾಧ್ಯ. ತಿರುನೆಲ್ಲಿ ರಸ್ತೆಯು ದಟ್ಟ ಕಾನನದ ತಿರುವುಮುರುವುಗಳ ಹಾದಿ. ಯಾವುದೇ ಸಮಯದಲ್ಲಿ ಪ್ರಾಣಿಗಳ ದರ್ಶನ ಭಾಗ್ಯ ಸಾಧ್ಯ. ಆನೆಗಳು ಸಿಗೊ ಸಾದ್ಯತೆ ಜಾಸ್ತಿ.
ಬದುಕು ಹೀಗೆನೆ ಅಂತ ಹೇಗೆ ಹೇಳಕಾಗತ್ತೆ? ಬೈಕಿಂಗ್ ನನ್ನ ಇಷ್ಟ. ಅದರಲ್ಲೂ ಕಾಡುಮೇಡು, ನದಿಝರಿ, ಹೊಳೆಕಣಿವೆ ಸುತ್ತಾಡುತ್ತಾ ನಿಸರ್ಗ ಪ್ರಾಣಿ ಪಕ್ಷಿಗಳನ್ನು ನೋಡೊದು, ಪೋಟೋಗ್ರಫಿ ಮನಸ್ಸಿ ಸಂತಸ ನೀಡತ್ತೆ.ತೋಳ್ಪಟ್ಟಿಯಿಂದ ತಿರುನೆಲ್ಲಿಗೆ ತಿರುವು ಪಡೆಯೋ ಸ್ಥಳ. ಬೆಳ್ಳಂ ಬೆಳಗ್ಗೆ ಕೈಮುರಿದು ಹೋಗೋವಷ್ಟು ಗಾಡಚಳಿಗೆ ಬೈಕ್ ರೈಡ್ ಮಾಡೋದು ಕಷ್ಟಸಾದ್ಯ.



ಇರ್ಪು ಜಲಪಾತ - ಕೊಡಗಿನ ಬ್ರಹ್ಮಗಿರಿ ರೇಂಜ್ ಅದ್ಬುತ ರಮಣೀಯ ಪ್ರದೇಶಗಳನ್ನು ಸೆರೆಹಿಡಿದಿದೆ. ಅವುಗಳಲ್ಲಿ ಒಂದಾದ ಇರ್ಪು ಜಲಪಾತ. ಇದು ಲಕ್ಷ್ಮಣ ತೀರ್ಥದ ಉಗಮ ಕೂಡ. ಮೂರು ಮೆಟ್ಟಿಲುಗಳೊಪಾದಿಯಲ್ಲಿರುವ ಜಲಪಾತವು ಕಣ್ಮಣಗಳನ್ನು ಸೆಳೆಯುತ್ತದೆ. ಮಳೆಗಾಲದಲ್ಲಂತೂ ಬೋರ್ಗರೆಯುತ ರುದ್ರರಮಣಿಯ ದೃಶ್ಯಕಾವ್ಯವನ್ನು ಪೋಣಿಸುತ್ತದೆ.
ಮಾಂದಾಲಪಟ್ಟಿ -  ಪುಷ್ಪಗಿರಿ ರೇಂಜ್ ನಲ್ಲಿರುವ ಮತ್ತೊಂದು ಮೋಹಕ ಸ್ಥಳ. ಗಾಳಿಪಟ ಸಿನೆಮಾ ನಂತರ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತಿರುವ ಗಿರಿಧಾಮ. ಬೈಕ್, ಜೀಪ್ ನಂತಹ ವಾಹನಗಳು ಓಡಾಡಲು ಸಾಧ್ಯ ಇರುವ ಡರ್ಕ್ ಟ್ರ್ಯಾಕ್. ತಿರುವುಮುರುವು ಚಿಂದಿ ರಸ್ತೆ, ಬೈಕಿಂಗ್ ಇಲ್ಲಿ ವೈಲ್ಡ್ ಅನುಭವ.
ಗಾಳಿಪಟ ಸಿನೆಮಾ ಸೂಟಿಂಗ್ ನಡೆಸಿರೊ ಸ್ಥಳ.



ಬೈಕ್ ಜೀಪ್ ಗಳು ಸವಾರಿ ನಡೆಸಿರೊ ಹಾದಿ.


ಡರ್ಕ್ ಟ್ರ್ಯಾಕ್ ಗಳಲ್ಲಿ ಸಾಗೋ ಅನುಭವ ಅಮೋಘ

ಮಾಂದಲಪಟ್ಟಿಯ ಪಾನರೊಮಿಕ್ ವ್ಯೂ.

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...