ತೋಳ್ಪಟ್ಟಿ - ನಾಗರಹೊಳೆ ಅಭಯಾರಣ್ಯಕ್ಕೆ ಅಂಟಿಕೊಂಡಿರೊ ವಯನಾಡಿನ ಮತ್ತೋಂದು ಅಭಯಾರಣ್ಯ. ಸಫಾರಿ ಮಾಡಲು ಅನುಕೂಲವಿದೆ. ನಿಮ್ಮ ಲಕ್ ಚೆನ್ನಾಗಿದ್ದರೆ ಪ್ರಾಣಿಗಳು ಲುಕ್ ಕೊಡೊದರಲ್ಲಿ ಸಂಶಯವಿಲ್ಲ |
ಹಾದಿ ಬದಿಯಲ್ಲಿ ಸಿಗುವ ಪ್ರಾಣಿಗಳಲ್ಲಿ ಜಿಂಕೆಗಳು ಸಾಕಷ್ಟು. ತಾಳ್ಮೆ ಅವಶ್ಯಕ ಹಾಗು ಕಾಡಿನ ಸೌಂದರ್ಯವನ್ನು ಅನುಭವಿಸುವ ಉದಾರತೆ ಮಾತ್ರ ಬೇಕೆಬೇಕು. ಈ ಹಾದಿಯ ಬೈಕಿಂಗ್ ಮನಸ್ಸಿಗೆ ಮುದವನ್ನುಕೊಡೊದರಲ್ಲಿ ಮೋಸವಿಲ್ಲ. |
.
ತಿರುನೆಲ್ಲಿ - ಬ್ರಹ್ಮಗಿರಿ ಬೆಟ್ಟದ ತಪ್ಪಲಲ್ಲಿರುವ ದೇವಸ್ಥಾನವು ವಿಷ್ಣು ದೇವರ ಸನ್ನಿಧಾನ. ಮನಮೊಹಕ ವೀಕ್ಷಣೆ ಇಲ್ಲಿಂದ ಸಾಧ್ಯ. ತಿರುನೆಲ್ಲಿ ರಸ್ತೆಯು ದಟ್ಟ ಕಾನನದ ತಿರುವುಮುರುವುಗಳ ಹಾದಿ. ಯಾವುದೇ ಸಮಯದಲ್ಲಿ ಪ್ರಾಣಿಗಳ ದರ್ಶನ ಭಾಗ್ಯ ಸಾಧ್ಯ. ಆನೆಗಳು ಸಿಗೊ ಸಾದ್ಯತೆ ಜಾಸ್ತಿ. |
ಇರ್ಪು ಜಲಪಾತ - ಕೊಡಗಿನ ಬ್ರಹ್ಮಗಿರಿ ರೇಂಜ್ ಅದ್ಬುತ ರಮಣೀಯ ಪ್ರದೇಶಗಳನ್ನು ಸೆರೆಹಿಡಿದಿದೆ. ಅವುಗಳಲ್ಲಿ ಒಂದಾದ ಇರ್ಪು ಜಲಪಾತ. ಇದು ಲಕ್ಷ್ಮಣ ತೀರ್ಥದ ಉಗಮ ಕೂಡ. ಮೂರು ಮೆಟ್ಟಿಲುಗಳೊಪಾದಿಯಲ್ಲಿರುವ ಜಲಪಾತವು ಕಣ್ಮಣಗಳನ್ನು ಸೆಳೆಯುತ್ತದೆ. ಮಳೆಗಾಲದಲ್ಲಂತೂ ಬೋರ್ಗರೆಯುತ ರುದ್ರರಮಣಿಯ ದೃಶ್ಯಕಾವ್ಯವನ್ನು ಪೋಣಿಸುತ್ತದೆ. |
ಮಾಂದಾಲಪಟ್ಟಿ - ಪುಷ್ಪಗಿರಿ ರೇಂಜ್ ನಲ್ಲಿರುವ ಮತ್ತೊಂದು ಮೋಹಕ ಸ್ಥಳ. ಗಾಳಿಪಟ ಸಿನೆಮಾ ನಂತರ ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತಿರುವ ಗಿರಿಧಾಮ. ಬೈಕ್, ಜೀಪ್ ನಂತಹ ವಾಹನಗಳು ಓಡಾಡಲು ಸಾಧ್ಯ ಇರುವ ಡರ್ಕ್ ಟ್ರ್ಯಾಕ್. ತಿರುವುಮುರುವು ಚಿಂದಿ ರಸ್ತೆ, ಬೈಕಿಂಗ್ ಇಲ್ಲಿ ವೈಲ್ಡ್ ಅನುಭವ. |
ಗಾಳಿಪಟ ಸಿನೆಮಾ ಸೂಟಿಂಗ್ ನಡೆಸಿರೊ ಸ್ಥಳ. |
ಬೈಕ್ ಜೀಪ್ ಗಳು ಸವಾರಿ ನಡೆಸಿರೊ ಹಾದಿ. |
ಡರ್ಕ್ ಟ್ರ್ಯಾಕ್ ಗಳಲ್ಲಿ ಸಾಗೋ ಅನುಭವ ಅಮೋಘ |
ಮಾಂದಲಪಟ್ಟಿಯ ಪಾನರೊಮಿಕ್ ವ್ಯೂ. |
No comments:
Post a Comment