Monday, March 20, 2017

ಗಂಗಡಿಕಲ್ಲು ಕುದುರೆಮುಖದ ಹೆಮ್ಮ

ಪರಿಚಯ: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಒಂದು ಕಾಲದ ಜನಸಂದಣಿಯ ಟೌನ್ ಷಿಪ್, ಪಶ್ಚಿಮ ಘಟ್ಟದ ಪ್ರಸಿದ್ಧ ಗಿರಿಧಾಮ ಹಾಗು ವನ್ಯಧಾಮ.  ಮಂಗಳೂರಿನಿಂದ ಸುಮಾರು 100 ಕಿ.ಮೀ ಹಾಗು ಬೆಂಗಳೂರಿನಿಂದ ಸುಮಾರು 330 ಕಿ.ಮೀ ದೂರದಲ್ಲಿದೆ.
             ಗಂಗಡಿಕಲ್ಲು ಕುದುರೆಮುಖ ಪರ್ವತ ಶ್ರೇಣಿಯ ಸುಂದರವಾದ ಚಾರಣ ತಾಣಗಳಲ್ಲಿ ಒಂದು. ಇದು ಮಾಳ-ಕುದುರೆಮುಖ ರಸ್ತೆಗೆ ಅತೀ ಹತ್ತಿರದಲ್ಲೆ ಇರುವ ಚಾರಣ ಪ್ರದೇಶ. ಸಮುದ್ರ ಮಟ್ಟದಿಂದ ಸುಮಾರು 1455 ಮೀ ಎತ್ತರದ ಈ ಚಾರಣ ಪ್ರದೇಶ, ಗಂಗಡಿಕಲ್ಲನ್ನು ಚಾರಣಿಸಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಕುದುರೆಮುಖ ರಾಷ್ಟ್ರೀಯ ವನ್ಯಜೀವಿ ಧಾಮವನ್ನು ಸಂಪರ್ಕಿಸಿದಲ್ಲಿ ಅನುಮತಿ ಹಾಗು ಗೈಡ್ ವ್ಯವಸ್ಥೆ ಸಿಗುವುದು. 
         ಈ ಚಾರಣಕ್ಕೆ ಅಕ್ಟೋಬರ್, ನವೆಂಬರ್, ಡಿಸೆಂಬರ್ ಹಾಗು ಜನವರಿ  ತಿಂಗಳು ಪ್ರಸಕ್ತವಾದ ಸಮಯ. ಮಳೆಗಾಲದ ಅವಧಿಯಲ್ಲಿ ಚಾರಣಕ್ಕೆ ಅವಕಾಶವಿರುವುದಿಲ್ಲ.
            ವಿಶಿಷ್ಟ ಸಸ್ಯ ಪ್ರಭೇದಗಳು ಇಲ್ಲಿನ ವೈಶಿಷ್ಟ್ಯ. ಕುದುರೆಮುಖ ಪರ್ವತ ಶ್ರೇಣಿಯು ಶೋಲಾ ಕಾಡು, ಹುಲ್ಲುಗಾವಲಿನ ಬೆಟ್ಟಗಳಾದುದರಿಂದ ಇಲ್ಲಿ ಕಡವೆ, ಕಾಡುಕೋಣ,  ಕಾಡುಕುರಿ, ಸಿಂಗಳೀಕಗಳು ಸಾಮಾನ್ಯವಾಗಿ ಕಂಡುಬರುವ ಕಾಡುಪ್ರಾಣಿಗಳು.  ಪಶ್ಚಿಮಘಟ್ಟದ ವಿಶೇಷ ಮಂಗಟ್ಟಿಗಳ ಹಾಗು ಚಿಟ್ಟೆಗಳ ತವರು ಕುದುರೆಮುಖ. 
            ಅದೊಂದು ಆದಿತ್ಯವಾರ ಬೆಳ್ಳಂಬೆಳಗ್ಗೆ ಕುದುರೆಮುಖ ಶ್ರೇಣಿಯ ಗಂಗಡಿಕಲ್ಲು ಚಾರಣ ಕೈಗೊಳ್ಳಲು ನಮ್ಮ ಗುಂಪು ಜೊತೆ ಹೊಗಿದ್ದೆ. ಈ ಚಾರಣದ ಕೆಲವು ಕ್ಷಣಗಳನ್ನು ಪೋಟೋ ಸಹಿತ ಇಲ್ಲಿ ದಾಖಲಿಸಿದ್ದೇನೆ.

 ಮಾಳ-ಕುದುರೆಮುಖ ರಸ್ತೆಯಲ್ಲಿ ಮಂಜಿನ ತೆರೆಯಲ್ಲಿ ಮುಸುಕಿದ ಗಂಗಡಿಕಲ್ಲಿನ ದೃಶ್ಯ. ಈ ರಸ್ತೆಯಲ್ಲಿ ಬೆಳಗ್ಗೆ ಅಥವಾ ಸಂಜೆಯ ಅವಧಿಯಲ್ಲಿ ಬೈಕಿಂಗ್ ಮಾಡುವುದೇ ಒಂದು ಅಹ್ಲಾದಕರ ಅನುಭವ.
                                   ಗಣಪತಿ ದೇವಸ್ಥಾನ ಗಂಟೆ ಬಾಗಿಲಿನಿಂದ ಹಾಗೆ ಒಂದು ಕ್ಲಿಕ್

                                 ಸೂರ್ಯನನ್ನೆ ಆವರಿಸಿದ ಮಂಜು ಹಾಗು ಪಕ್ಕದಲ್ಲೊಮದು ಒಂಟಿ ಮರ.
                                                        ಚಾರಣದ ಆರಂಭದ ಕ್ಷಣಗಳು...

                                      ದೂರದ ಇಳಿಜಾರಿನಲ್ಲಿ ಹುಲ್ಲು ಮೇಯುತ್ತಿರುವ ಕಾಡು ಕುರಿಗಳು.
                                       ಇಲ್ಲಿ ವಿಶಿಷ್ಟ ಸಸ್ಯ ಹಾಗು ಕೀಟ ಪ್ರಭೇದಗಳನ್ನು ಕಾಣಬಹುದು.

                                 ಮೋಡಗಳು ದೇಹ ಹಾಗು ಮನಸ್ಸನ್ನು ಸ್ಪರ್ಶಿಸಿ ಹಿತಾನುಭವ ನೀಡುತ್ತದೆ.

                                  ಕಣ್ಣು ಎಟಕುವಷ್ಟೂ ದೂರ ಸುಂದರ ದೃಶ್ಯಗಳು ನೋಡುಗರಿಗೆ ಸಾಮಾನ್ಯ.
                 ಗಂಗಡಿಕಲ್ಲು ಹಾಗು ಕುದುರೆಮುಖ ಶ್ರೇಣಿಯ ಹಸಿರು ಆಹ್ಲಾದಕರ ಅನುಭವ ನೀಡುವುದು.


                                                    Back water of Lakhya Dam.






 ಬೆಟ್ಟದ ತುದಿಯಿಂದ ಸುಂದರವಾದ ಕುದುರೆಮುಖ ಪರ್ವತ ಶ್ರೇಣಿಯ ವಿಹಂಗಮನೋಟವನ್ನು ಕಾಣಬುಹುದು.

No comments:

Post a Comment

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...