Thursday, April 20, 2017

ತಿರುಗಾಟದ ಚಿತ್ರಗಳು-19

ಜೆ.ಪಿ ಪಾರ್ಕ್ ನಲ್ಲಿ ನೇರಳೆ ಬಣ್ಣದ ಹೂ ಬಿಟ್ಟ ಮರ.

Sunday, April 16, 2017

Saturday, April 15, 2017

ತಿರುಗಾಟದ ಚಿತ್ರಗಳು-16

ಯಕ್ಷಗಾನ- ಮಹಿಷಾಸುರ ಪುರ ಪ್ರವೇಶ.

ತಿರುಗಾಟದ ಚಿತ್ರಗಳು-15

ಸ್ಯಾಂಕಿ ಕೆರೆಯ ದಡದಲ್ಲಿ ಒಂದು ಸಂಜೆ.

ತಿರುಗಾಟದ ಚಿತ್ರಗಳು-14

ಸಹಜ ಖುಷಿ

ತಿರುಗಾಟದ ಚಿತ್ರಗಳು-13

ನಾಣ್ಯದ ಭೈರವೇಶ್ವರ ದೇವಸ್ಥಾನ.

ತಿರುಗಾಟದ ಚಿತ್ರಗಳು-12

ಚಿತ್ರಸಂತೆ-2017








ತಿರುಗಾಟದ ಚಿತ್ರಗಳು-11

ಬೇಲೂರಿನಲ್ಲಿ ಕಂಡ ಒಂದು ಸಂಜೆ.

ತಿರುಗಾಟದ ಚಿತ್ರಗಳು-10

ಮೆಲ್ಕಾರು ರಸ್ತೆಯಲ್ಲಿ ಸಾಗುವಾಗ ಕಾಣಿಸಿದ್ದು.

ತಿರುಗಾಟದ ಚಿತ್ರಗಳು-9

ಪುತ್ತೂರು ರೈಲು ನಿಲ್ದಾಣದ ಪಕ್ಕ...

ತಿರುಗಾಟದ ಚಿತ್ರಗಳು-8

ನಮ್ಮೂರಿನ ಮುಂಗಾರು ದಿನಗಳ ಆಗಸ.

ತಿರುಗಾಟದ ಚಿತ್ರಗಳು-7

ಕೋಣಾಜೆಯ ರಸ್ತೆ ಬದಿ ಕಂಡ ಹೂವರಳಿ ನಿಂತ ಸಂಪಿಗೆ ಮರ.

ತಿರುಗಾಟದ ಚಿತ್ರಗಳು-6

ತಣ್ಣೀರು ಬಾವಿ ಬೀಚ್ ನಲ್ಲಿ ಒಂದು ಸಂಜೆ.

ತಿರುಗಾಟದ ಚಿತ್ರಗಳು-5

ಮೆಲ್ಕಾರು ದಾರಿಯಲ್ಲಿ ಕಂಡ ಇಳಿ ಸಂಜೆಯ ನೋಟ.

ತಿರುಗಾಟದ ಚಿತ್ರಗಳು-4

ಕಾಡಿನ ನಡುವಿನ... ಮನಮೋಹಕ ನೀರ ಝರಿ.

ತಿರುಗಾಟದ ಚಿತ್ರಗಳು-3

ಸುಳ್ಯದ ಸಿಸಿಡಿ.

ತಿರುಗಾಟದ ಚಿತ್ರಗಳು-2

ಆನೆದಾಟು ಕಾಡಿನಲ್ಲಿ ಮಳೆಕಾಲದ ಒಂದು ದಿನ.

ತಿರುಗಾಟದ ಚಿತ್ರಗಳು-1

Friday, April 14, 2017

ಮಲೆನಾಡಿನ ಮರೆಯಲಾರದ ಕವಳೆ ದುರ್ಗ ಕೋಟೆ

ಪರಿಚಯ: ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ ದೂರದಲ್ಲಿ ದಟ್ಟ ಅರಣ್ಯದೊಳಗೆ ಮರೆಯುವ ಅಂಚಿನಲ್ಲಿರುವ ಕವಳೆ ದುರ್ಗ ಕೋಟೆಯು ಇದೆ. ಸುಮಾರು 9ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ, ಮುಂದೆ ಸ್ವತಂತ್ರ ಆಡಳಿತಗಾರರಾದ ಕೆಳದಿಯ ವೆಂಕಟಪ್ಪ ನಾಯಕರಿಂದ ನಿರ್ಮಿಸಲ್ಪಟ್ಟ ಕವಳೆದುರ್ಗ ಕೋಟೆಯು, ಭುವನಗಿರಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತದೆ. ಬೃಹತ್ ಕಪ್ಪು ಕಲ್ಲುಗಳಿಂದ ನಿರ್ಮಿಸಲ್ಪಟ್ಟ ಮೂರು ಸುತ್ತಿನ ಈ  ಕೋಟೆಯಾಗಿದೆ. ಕೆಳದಿಯ ನಾಯಕರಿಂದ ನಿರ್ಮಾಣವಾದ ಸುಂದರ ಹಾಗು ಶತ್ರುಗಳಿಂದ ಸುಲಭವಾಗಿ ನುಗ್ಗಲು ಅಸಾಧ್ಯವಾದ ಗಟ್ಟಿ ಮುಟ್ಟಾದ ಕೋಟೆಯ ಒಳಗೆ ಮನೋಹರ ವಾಸ್ತುಶಿಲ್ಪಗಳಿಂದ ನಿರ್ಮಿತವಾದ ಅರಮನೆಯ ಕುರುಹುಗಳು, ದೇವಸ್ಥಾನಗಳು, ಮುರಿದುಬಿದ್ದ ಆನೆ, ಕುದುರೆ ಲಾಯಗಳು, ಫಿರಂಗಿ, ಶಸ್ತ್ರ ಭಂಡಾರ ಹಾಗು ವ್ಯವಸ್ಥಿತವಾಗಿ ನಿರ್ಮಿತವಾದ ನೀರಿನ ಕೊಳಗಳ ಕುರುಹುಗಳನ್ನು ಕಾಣಬಹುದು. 

ಅರಣ್ಯದಿಂದ ಆವೃತವಾದ ಇತಿಹಾಸದಲ್ಲಿ ಹುದುಗಿ ಹೋಗುತ್ತಿರುವ ಕವಳೆದುರ್ಗ ಕೋಟೆಯ ನೋಟ

ಕೋಟೆಗೆ ಹೋಗಲು ನಿರ್ಮಿಸಿದ ಅಗಲ ರಸ್ತೆ.


ಕೋಟೆಯ ಮುಖ್ಯ ದ್ವಾರದಲ್ಲಿರುವ ಬೃಹತ್ ಕಾವಲು ಗೋಪುರ.









ಕೋಟೆಯ ಕಲ್ಲು ಗೋಡೆಗಳಲ್ಲಿ ಕೆತ್ತಿರುವ ವಾಸ್ತುಶಿಲ್ಪಗಳು

ಕೋಟೆಯ ಬಗ್ಗೆ ಮಾಹಿತಿ ನೀಡುತ್ತಿರುವ ಗೈಡ್.




ಕೆಳದಿಯ ನಾಯಕರು ಪೂಜಿಸುತ್ತಿದ್ದ ನಾಗ ದೇವರ ಕಲ್ಲುಗಳು. ನಾಗದೇವರುಗಳು ಕೋಟೆಯನ್ನು ಹೊರಗಿನ ಶತ್ರುಗಳಿಂದ ರಕ್ಷಿಸುತ್ತಿದ್ದರೆಂಬ ಪ್ರತೀತಿ. ಕರಾವಳಿ ಹಾಗು ಮಲೆನಾಡ ಕೆಲಭಾಗಗಳಲ್ಲಿ ನಾಗದೇವರ ಆರಾದನೆ ಈಗಲೂ ಸಾಮಾನ್ಯ.
















ದೇವಾಲಯದ ಗೋಡೆಗಳ ಮೇಲೆ ಕೆತ್ತಲ್ಪಟ್ಟ ಯುದ್ದದ ಕೆತ್ತನೆಗಳು





ಬಳಸುತ್ತಿದ್ದ ಬೀಸು ಕಲ್ಲು







ಕೋಟೆಯೊಳಗೆ ಕಪ್ಪು ಕಲ್ಲು ಶಿಲೆಯಲ್ಲಿ ಕೆತ್ತಿರುವ ಶಾಸನ



ಕಪ್ಪು ಕಲ್ಲು ಬಂಡೆಯೊಳಗೆ ನಿರ್ಮಿಸಿದ ನೀರಿನ ಸಂಪು. ಅಂದಿನ ಕಾಲದಲ್ಲಿ ನೀರಿನ ಸಮಗ್ರ ನಿರ್ವ



ಮುಚ್ಚಿಗೆಯ ಬಾವಿ


ಅರಮನೆ ಹಾಗು ಇತರೇ ಬಳಕೆಗಾಗಿ ನೀರಿನ ಮೂಲಗಳಿಂದ ನೀರು ಸರಬರಾಜಿಗಾಗಿ ಮಾಡಿದ್ದ ವ್ಯವಸ್ಥೆ.   ಪೈಪು ವ್ಯವಸ್ಥೆ ಇಲ್ಲದ  ಕಾಲದಲ್ಲಿ ನೀರು ಪೂರೈಕೆಯನ್ನು ವ್ಯವಸ್ಥಿತವಾಗಿ ಮಾಡಿಕೊಂಡಿರುವುದನ್ನು ನಾವು ಕಾಣಬಹುದು.


ಕಾಳುಮೆಣಸು ಬೆಳೆಯು ಕೆಳದಿ ಸಂಸ್ಥಾನದ ವಾಣಿಜ್ಯ ಬೆಳೆಯಾಗಿದ್ದನ್ನು ನಾವು ಕೋಟೆಯ ಸುತ್ತಲೂ ಹರಡಿರುವ ಕಾಳು ಮೆಣಸು ಗಿಡಗಳಿಂದ ಕಾಣಬಹುದು.




ಅರಮನೆಯಲ್ಲಿ ಬಳಸುತ್ತಿದ್ದ ಸ್ನಾನದ ತೊಟ್ಟಿ.

ಅರಮನೆಯ ಕುರುಹಿನ ಚಿತ್ರಗಳು. ವ್ಯವಸ್ಥಿತ ವಾದ ಅಡುಗೆ ಒಲೆಗಳು, ಸ್ನಾನಗೃಹ, ತೊಟ್ಟಿಗಳು, ನೀರು ಪೂರೈಕೆ ವ್ಯವಸ್ಥೆಗಳು, ಕೋಣೆಗಳನ್ನು ಇಲ್ಲಿ ಗಮನಿಸಬಹುದು.




ಕಪ್ಪು ಕಲ್ಲಿನಿಂದ ನಿರ್ಮಿಸಿದ ಪಂಚ ಜ್ವಾಲೆಗಳ ಒಂಟಿ ಒಲೆಯು ಈ ಅರಮನೆಯಲ್ಲಿನ ಅಡುಗೆ ಕೋಣೆಯಲ್ಲಿ ಬಳಸಿದ ನೈಪುಣ್ಯತೆಯನ್ನು ಕಾಣಬಹುದು.
ಮಸಾಲೆ ಕಡಿಯುವ ಕಲ್ಲು


ತೊಟ್ಟಿ

ರಾಜ, ರಾಣಿಯರ ಸ್ನಾನದ ಕರೆ
ಉತ್ಖನಗೊಂಡ ನಂತರ ಕಾಣಿಸುತ್ತಿರುವ ಅರಮನೆಯ ಕುರುಹುಗಳು


ಕೋಟೆಯ ಮೇಲಿನಿಂದ ಕಾಣುವ ಪಶ್ಚಿಮ ಘಟ್ಟದ ನೋಟ.

ಕೋಟೆಯ ಮೇಲಿನಿಂದ ಕಾಣುವ ಮತ್ತೊಂದು ರಮಣೀಯ ನೋಟ.

ಶಸ್ತ್ರಗಾರ

ಏಕಶಿಲೆಯ ಮೇಲೆ ನಿರ್ಮಿಸಿದ ಗೋಪುರ
ಶಿವಲಿಂಗ


ನೀರಿನ ತೊಟ್ಟಿ


ಸ್ನಾನ ತೊಟ್ಟಿ ಹಾಗು ಫಿರಂಗಿಯ ಉಳಿಕೆ

ನೀರು ಸಂಗ್ರಹಗಾರ


ಅಪೂರ್ವ ವಾಸ್ತುಶಿಲ್ಪ ಕೆತ್ತನೆಗಳಿರುವ ಕಪ್ಪು ಶಿಲಾ ಕಟ್ಟಡಗಳು ನೋಡಲು ಸುಂದರವಾಗಿದೆ.

ಕೊನೆಯದಾಗಿ: ಕೆಳದಿಯ ನಾಯಕರು ನಿರ್ಮಿಸಿದ ಅಮೋಘ ಕವಳೆದುರ್ಗ ಕೋಟೆಯು ಇಲಾಖೆಯ ನಿರ್ಲಕ್ಷ್ಯದಿಂದ ಕಾಲನ ಗರ್ಭದೊಳಗೆ ಮೆಲ್ಲನೆ ಮರೆಯಾಗುತಿರುವುದು ವಿಷಾದನೀಯ. ಕೋಟೆಯನ್ನು ಸಮಗ್ರವಾಗಿ ನಿರ್ವಹಣೆ ಹಾಗು ಸಮರ್ಪಕ ಉತ್ಖನ ಕಾರ್ಯಗಳಿಂದ ಅರಣ್ಯ ಗರ್ಭದೊಳಗೆ ಹುದುಗಿರುವ ಸತ್ಯಗಳು ಹಾಗು ಕೆಳದಿಯ ನಾಯಕರ ಇತಿಹಾಸ ಪ್ರಪಂಚಕ್ಕೆ ತಿಳಿಯಬಹುದೇನೋ.

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...