Friday, April 14, 2017

ಮಾಂದಾಲಪಟ್ಟಿ- ಕೊಡಗಿನ ರೂಪಸಿ.

ಪರಿಚಯ: ಮಡಿಕೇರಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮಾಂದಾಲಪಟ್ಟಿ ಯಾನೆ ಮುಗಿಲುಪೇಟೆ ಪುಷ್ಪಗಿರಿ ವಲಯದ ಅತಿ ಹೆಚ್ಚು ಭೇಟಿಕೊಡುವ ಸ್ಥಳ. ಸಮುದ್ರಮಟ್ಟದಿಂದ ಸುಮಾರು 4000 ಮೀ ಎತ್ತರದಲ್ಲಿರುವ ರಮಣೀಯ ಪ್ರದೇಶ. ಮಾಂದಾಲಪಟ್ಟಿ,  ಗಾಳಿಪಟ ಕನ್ನಡ ಸಿನಿಮಾ ನಂತರ, ಕೊಡಗಿನಲ್ಲೇ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳ.  ಶಿಖರ ತುದಿ ತಲುಪಲು ಸಾಮಾನ್ಯ  ಕಾರ್ ಗಳನ್ನು ಬಳಸುವುದು ರಸ್ತೆ ಹಾಗು ಸುರಕ್ಷತೆ ದೃಷ್ಟಿಯಿಂದ ಸೂಕ್ತವಲ್ಲದೇ ಇರುವುದರಿಂದ, ಶಿಬಿರ ಮೂಲದಲ್ಲಿ  ಲಭ್ಯವಿರುವ ಬಾಡಿಗೆ ಜೀಪ್ ಬಳಸುವುದು ಸೂಕ್ತ.  ಹಸಿರಿನಿಂದ ತುಂಬಿದ, ಮೊಡಗಳಿಂದ ಆವೃತವಾದ ಬೆಟ್ಟಗಳನ್ನು ಹಾಗು ಥಂಡಿ ತಂಗಾಳಿಯನ್ನು ಮಾಂದಾಲಪಟ್ಟಿಯಲ್ಲಿ ಅನುಭವಿಸಲು  ಸೆಪ್ಟೆಂಬರ್ ನಿಂದ ಜನವರಿ ಯಲ್ಲಿ ಇಲ್ಲಿಗೆ  ಭೇಟಿ ನೀಡುವುದು ಉತ್ತಮ.

 ಪ್ರವಾಸಿಗರನ್ನು ಸಾಗಿಸುತ್ತಿರುವ ಬಾಡಿಗೆ ಜೀಪುಗಳು. ಸಾಧಾರಣ ಕಾರುಗಳು ಈ ರಸ್ತೆಯಲ್ಲಿ ಸಾಗುವುದು ಕಷ್ಟ.
  ಅರಣ್ಯ ಇಲಾಖೆ ಠಾಣೆಯ ಪಕ್ಕದಲ್ಲಿರುವ ಕೊಳ.


 ಬೆಟ್ಟದ ತುದಿಯಲ್ಲಿರುವ ಅರಣ್ಯ ಇಲಾಖೆಯ ಠಾಣೆ ಹಾಗು ಪಕ್ಕದಲ್ಲಿನ ಕೊಳ.





 ಬಿಸಿಲಿನ ಬೇಗೆಗೆ ಒಣಗಿದ ಬೆಟ್ಟಗುಡ್ಡಗಳು
 ಬೆಟ್ಟದ ತುದಿಯಲ್ಲಿರುವ ವೀಕ್ಷಣಾ ಗೋಪುರ

 ಬಿಸಿಲಿನ ಬೇಗೆಗೆ ಒಣಗಿ ಮಳೆಗಾಗಿ ಕಾದು ನಿಂತ ಬೆಟ್ಟಗುಡ್ಡಗಳು




 ಜೀಪುಗಳು ಬೆಟ್ಟದ ತುದಿಗೆ ಹೋಗಿ ಉಂಟಾದ ದಾರಿ.
 ಹದಗೆಟ್ಟ ಡಾಮಾರು ರಸ್ತೆ

No comments:

Post a Comment

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...