ಈ ವಾರಾಂತ್ಯ ಚಾರಣದಲ್ಲಿ ದೇವರಮನೆ ಹಾಗು ಹೊರಟ್ಟಿಯನ್ನು ಸುತ್ತಾಡಿಕೊಂಡು ಬರಲು ಹೋದಾಗ ಕಂಡ ದೃಶ್ಯಗಳು. ಬೆಂಕಿ ಬಿದ್ದು ಸುಟ್ಟು ಹೋದ ಬೆಟ್ಟ ಗುಡ್ಡಗಳು, ಉರಿಯುತ್ತಿರುವ ಗುಡ್ಡಗಳು, ನೀರಿನ ಹರಿವಿಲ್ಲದೆ ಒಣಗಿ ನಿಂತ ಹಳ್ಳಗಳು, ಬಿಸಿಲ ಝರಿ... ಇದು ಈಗಿನ ನಮ್ಮ ಘಟ್ಟದ ಬೆಟ್ಟಗಳ ಕಥೆ. ಇದರ ಕೆಲವು ತುಣುಕುಗಳನ್ನು ಇದೋ ನಿಮ್ಮ ಮುಂದೆ ಪೋಟೋ ಸಹಿತ ದಾಖಲಿಸುತ್ತಿದ್ದೇನೆ.
ಬೆಳ್ಳಂ ಬೆಳಕಿನಲಿ ಸಾಗರದಂತೆ ಮುಸುಕಿದ ಮಂಜು. ಗರಿಗೆದರಿದ ಸೂರ್ಯ... ನೋಡುವ ಕಣ್ಮನಗಳಿಗೆ ಚಂದದ ನೋಟ. |
ಮಂಜಿನ ಚಾದರಹೊದ್ದ ಬೆಟ್ಟಗಳ ಸಾಲಿನಲಿ ಕಾಣುತಿರುವ ಜೇನುಕಲ್ಲು ಹಾಗು ದೀಪದಕಲ್ಲು ಬೆಟ್ಟಗಳು.
ಕಣಿವೆಗಳೊಳಗೆ ಬೆಳಕ ಚೆಲ್ಲುತ್ತಿರುವ ಸೂರ್ಯ... ಕತ್ತಲಿನಿಂದ ಬೆಳಕಿನಡೆಗೆ.
ದೇವರಮನೆಯ ದೂರದ ನೋಟ.
ಹೊರಟ್ಟಿ ಪ್ರದೇಶವು ಆನೆಗಳ ಕಾರಿಡಾರ್. ವಿಶಿಷ್ಟ ಪಕ್ಷಿ ಪ್ರಭೇದಗಳು ಕಾಣಲು ಸಿಗುತ್ತದೆ.
ಬೆಂಕಿ ಬಿದ್ದೋ/ಕೊಟ್ಟೋ ಸುಟ್ಟು ಹೋದ ಹೊರಟ್ಟಿಯ ಸುತ್ತಲಿನ ಬೆಟ್ಟಗಳು...
No comments:
Post a Comment