Thursday, January 16, 2014

ಮೈದಾಡಿ - ಪಶ್ಚಿಮಘಟ್ಟದ ಸ್ವರ್ಗ

ಪಶ್ಚಿಮ ಘಟ್ಟ ಸಾಲುಗಳೇ ಹಾಗೆ, ಮಳೆಯಿರಲಿ, ಚಳಿಯಿರಲಿ ಅಥವಾ ಬಿಸಿಲೇ ಇರಲಿ... ಚಾರಣಿಗರ ಸ್ವರ್ಗ ಅದು. ಇದೊಂದು ಮಳೆಕಾಲದ ದಿನ ನಾನು ನನ್ನ ಗೆಳೆಯ, ಕುದುರೆ ಮುಖ ವಲಯದ ಮಳೆಯ ಸೌಂದರ್ಯವನ್ನು ಆಸ್ವಾದಿಸಲು ಬೈಕ್ ನಲ್ಲಿ ಹೊರಟೆ ಬಿಟ್ಟೆವು. ನಮ್ಮ ಗುರಿ ಮೈದಾಡಿ. ನಾವು ಆರಿಸಿದ ದಾರಿ ಬಜಗೋಳಿ ಮೂಲಕ ಮೈದಾಡಿಯನ್ನು ತಲುಪುವುದು.
ಅದೊಂದು ಅಮೋಘ ಬೈಕಿಂಗ್. ತರಗುಟ್ಟುವ ಚಳಿ ಮಳೆಯಲ್ಲಿ ಬೈಕಿಂಗ್ ಹೋಗುವುದೆ ಸೂಪರ್... ನೀವೊಮ್ಮೆ ಹೀಗೆ ಮಜಾ ಅನುಭವಿಸಿ... ಅವಿಸ್ಮರಣಿಯ ಅನುಭವಗಳ.
 ದಾರಿಯಲ್ಲಿ ತೆಗೆದ ಕೆಲವೊಂದು ಚಿತ್ರಗಳು ನಿಮಗಾಗಿ...
ಮಳೆಗಾಲದಲ್ಲಿ ಮೈದುಂಬಿ ರಭಸದಿಂದ ಹಾಲ್ನೊರೆಯುಕ್ಕುತಾ
ದುಮ್ಮಿಕ್ಕುವ ಜಲಧಾರೆಗಳು ಮನಮೋಹಕ. 
ಬೈಕ್ ನ ಹ್ಯಾಂಡಲ್ ಏರಿ ಸೌಂದರ್ಯ ನೋಡ ಹೊರಟ ಕೋತಿ ರಾಜ.
ಸೌಂದರ್ಯದಲ್ಲಿ ನಿಮಗೇನು ಕಮ್ಮಿ ನಾ... ಸ್ವಲ್ಪ ಮೇಕಪ್ ಮಾಡ್ಕೊಂಡ್ರೆ ಚೆನ್ನಾಗಿರತ್ತಲ್ವ?
ಮೋಹಕ ಮೈದಾಡಿ


ಮೋಡಗಳ ಮೈದುಂಬಿಕೊಂಡ ಮೈದಾಡಿ, ಅವಿಸ್ಮರಣೀಯ ಚಿತ್ರಗಳು ಕಣ್ತುಂಬ. ಮೋಗೆದಷ್ಟು ಮೊಗ ತುಂಬಾ
ರಾಚುವ ಮೋಡಗಳ ರಾಶಿ.






ಮೈದಾಡಿಯಿಂದ ದೂರದಲ್ಲಿ ಕಾಣುವ ಮೋಡದ ರಾಶಿಯೋಳಗಿನ ಜಮಾಲಬಾದ್ ಕೋಟೆ











No comments:

Post a Comment

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...