ಚಾರ್ಮಾಡಿಯೆ ಹಾಗೆ... ಒಳಹೊಕ್ಕಿದಷ್ಟು ಗಮ್ಯವಾಗೆ ಉಳಿಯುವ ಅಚಲೆ. ಅಮೋಘ ಪ್ರಕೃತಿ ಸೌಂದರ್ಯವನ್ನು ಒಡಲೊಲ್ಲಡಗಿಸಿದ ಚತುರೆ. ಅದಕ್ಕೊಂದು ಉದಾಹರಣೆ ಈ ಚಿತ್ರ. |
ಸೂರ್ಯ ಪೂರ್ವದ ದಾರಿಗೆ ಅಡಿಯಿಡುವ ಮುಂಚೆಯೇ ಚೀಲವನ್ನು ಹದೆಗೇರಿಸಿ ಹೊರಟ ನಾವು ಬೆಳಗು ರಂಗೇರುವ ಮುಂಚೆಯೆ ಬೆಟ್ಟಗಳ ತುದಿಯಲ್ಲಿ ನಡೆಯಲು ಶುರುಹಚ್ಚಿಕೊಂಡೆವು. |
ಪಶ್ಚಿಮಘಟ್ಟಗಳ ಬೆಟ್ಟಸಾಲುಗಳೇ ಹಾಗೆ, ಮೋಹಕ, ಮನೋಹರ, ರುದ್ರ ರಮಣೀಯ... ನೋಡಿದಷ್ಟು ರಮಣೀಯ, ಮೋಹಿಸಿದಷ್ಟು ಮೋಹಕ. ನಡೆದಷ್ಟೂ ಚಂಚಲ. |
ಬೆಟ್ಟಗಳ ಹಿಂದೊಂದು ಬೆಟ್ಟಗಳ ಮೆರವಣಿಗೆ... ಟೋಪಿ ಹಾಕಿದ ಬೆಟ್ಟ, ಟೋಪಿ ಹಾಕಿಸುವ ಬೆಟ್ಟ, ಬೆಟ್ಟಗಳ ನಡುವೆ... ಮತ್ತೇರಿಸಿ ಮರೆಯಾಗಿಸುವ ಶೋಲಾ ಅರಣ್ಯ. ಬನ್ ನಡುವಿಂದಿಣುಕುವ ಜಾಮ್ ನ ಹಾಗೆ. |
ಜನವರಿಯ ಚಳಿಗೆ ಬೆಳಗ್ಗಿನ ಬಿಸಿಲಿಗೆ ಬೆಟ್ಟಗಳ ತುದಿಯಲ್ಲಿ ನಡೆಯುವುದೇ ಮನಸ್ಸಿಗೆ ಆನಂದ, ಅಹ್ಲಾದ! ರೆಡ್ ರೋಸ್ ಚಾ ಕುಡಿದಂತೆ. ಪ್ರಾಣಿಗಳು ನಡೆದಾಡುವ ಹಾದಿಯೆ ನಮಗೆದುರು. |
ಟೋಪಿವಾಲ ಬೆಟ್ಟ ಅಂಟಿಕೊಂಡ ಶೋಲಾ ಅರಣ್ಯ |
ಚಾರ್ಮಾಡಿಯ ಪ್ರದೇಶಗಳನ್ನು ಗುರುತಿಸುತ್ತಿರುವ ಕಾಮತರು ಜೊತೆಯಲ್ಲಿ ರಾಕೇಶ್ ಹಾಗು ಸುದೀರ್. ಕಾಮತರ ಜೋಕುಗಳು ಜೊತೆಯದ್ದವರಿಗೆ ನಗೆಬುಗ್ಗೆಗಳು. |
ಗಿಡುಗಬೆಟ್ಟ - ಬೇಟೆಗಾಗಿ ಹಾತೊರೆಯುತ್ತಿರುವ ಗಿಡುಗ. |
ಮಾಯಾ ಬೆಟ್ಟಗಳು... ಒಂದರಹಿಂದೊಂದು ಅಡಗಿಕುಳಿತಿರುವ ನೋಟ. ನಡೆದಷ್ಟು ಮುಗಿಯದ ಹಾದಿ. |
ಮಂಜಿನಹೊದಿಕೆಯೊಳಗಿನ ಬೆಟ್ಟ |
ಶೋಲಾ ಅರಣ್ಯದಲ್ಲಿ ಕಾಣಸಿಗುವ ಸುಂದರ ಪುಪ್ಪಗಳಲ್ಲೊಂದು. ಪಶ್ಚಿಮಘಟ್ಟಗಳು ಅಮೋಘ ಪುಪ್ಪಗಳ ಉದ್ಯಾನ. |
No comments:
Post a Comment