Thursday, August 9, 2012

ಗೆಳೆಯರೆ ಹೀಗೆ...


ಗೆಳೆಯರೆ ಹೀಗೆ... ಎದೆಗಚ್ಚುವ ಸದ್ದಿನಂತೆ,
ಕುಂಭದ್ರೋಣದ ಮಳೆಯಂತೆ, ಸಂಜೆಗತ್ತಲ ಇರಿಂಟಿಯಂತೆ.
 ಗಾಳಿ ಮಳೆಗೆ ಹೋದ ಕರೆಂಟಿನಂತೆ, ಕತ್ತಲಲ್ಲಿ ಬೆಳಗಿದ ಮಿಣುಕು ಹುಳದಂತೆ
 ಮೀನು ಮಾರುಕಟ್ಟೆಯ ಜನಜಂಗುಳಿಯಂತೆ, ಗೂಡಿನೊಳಗಿನ ಕೋಳಿಯಂತೆ.
 ಪ್ರೈ ಯಾಗುತ್ತಿರುವ ಸಾಸಿವೆಯಂತೆ, ಕೆಂಡಕ್ಕೆ ಹಾಕಿದ ಕೆಂಪು ಮೆಣಸಿನಂತೆ.
 ಬೇಸಗೆಯ ಸ್ಪಟಿಕ ನೀರಿನಂತೆ, ಗುಡ್ಡದ ಮೇಲಿನ ತಂಗಾಳಿಯಂತೆ.
 ಕಿವಿಗಚ್ಚುತ್ತಾರೆ, ಚಳಿ ಹಿಡಿಸುತ್ತಾರೆ.
 ಅದೆಲ್ಲೋ ಮಾಯವಾಗುತ್ತಾರೆ, ಬೆಳಕಾಗಿ ಮಿಂಚುತ್ತಾರೆ.
 ಕಿರಿಕಿರಿ ಮಾಡುತ್ತಾರೆ, ದಮ್ಮುಗಟ್ಟಿಸುತ್ತಾರೆ.
 ಮನಸ್ಸು ಮುದಗೊಳಿಸುತ್ತಾರೆ, ತಂಪಾಗಿಸುತ್ತಾರೆ.
 ಏನೇ ಆದರೂ... ಪ್ರತಿಯೊಬ್ಬ ಪ್ರೆಂಡ್ ಬೇಕೆ ಬೇಕು ಕಣೋ.

No comments:

Post a Comment

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...