Monday, March 20, 2017

ಶಿವಗಂಗೆ ಚಾರಣ

ಪರಿಚಯ: ಶಿವಗಂಗೆ ನಗರ ಚಾರಣಿಗರ ಹತ್ತಿರದ ಚಾರಣ ಸ್ಥಳ.  ಬೆಂಗಳೂರು-ತುಮಕೂರು ರಸ್ತೆಯ ದಾಬಾಸ್ ಪೇಟೆಯಲ್ಲಿದೆ.  ಬೆಂಗಳೂರಿನಿಂದ ಸುಮಾರು 55 ಕಿ.ಮೀ ಹಾಗು ತುಮಕೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಶಿವಗಂಗೆ  ಸುಮಾರು 800 ಮೀ ಎತ್ತರದ ಬೆಟ್ಟವಾಗಿದೆ. ಈ ಬೆಟ್ಟದಲ್ಲಿ ಗವಿಗಂಗಾಧರೇಶ್ವರ, ಹೊನ್ನಮ್ಮ ದೇವಿ ದೇವಸ್ಥಾನಗಳಿವೆ. ಈ ದೇವಸ್ಥಾನಗಳು ವಿಶೇಷವಾಗಿ ಗವಿಗಳ ಒಳಗೆ ಇವೆ. ಒಂಟಿ ಕಲ್ಲಿನ ಮೇಲೆ ಕೆತ್ತಿರುವ ಬಸವ ನೋಡಲು ವಿಶೇಷ, ಪಾತಾಳಗಂಗೆ, ಒಳಕ್ಕಲ್ ತೀರ್ಥಗಳಿದ್ದು ದೂರದ ಊರುಗಳಿಂದ ಭಕ್ತಾಧಿಗಳು ಹಾಗು ಚಾರಣಿಗರು ಭೇಟಿ ನೀಡುತ್ತಾರೆ. 
ಶಿವಗಂಗೆಯ ಮೊದಲ ಹಂತದ ಚಾರಣ ಸುಲಭವಾಗಿದೆ, ದ್ವಿತೀಯ ಹಂತವು ಸಾಧಾರಣ ಹಾಗು ಕೊನೆಯ ಹಂತದ ಚಾರಣವು ಸ್ವಲ್ಪ ಕಠಿಣವಾಗಿದೆ. ದಾರಿ ಮಧ್ಯ ತಣಿವು ಆರಿಸಲು ಚಿಕ್ಕ ಚಿಕ್ಕ ಅಂಗಡಿಗಳಿದ್ದು ನೀರು, ಮಜ್ಜಿಗೆ, ಲಿಂಬೆ ಪಾನಕಗಳು ಸಿಗುತ್ತದೆ. 
ಬೆಟ್ಟದಲ್ಲಿ ವಾನರರ ಉಪಟಳ ಜಾಸ್ತಿ ಇದ್ದು ತಿಂಡಿ, ಹಣ್ಣು ಗಳಿದ್ದಲ್ಲಿ ಜಾಗ್ರತೆವಹಿಸಿಕೊಳ್ಳುವುದು ಸೂಕ್ತ. 
 ಬೆಂಗಳೂರಿನಿಂದ ಬೈಕಿಂಗ್ ಹೊರಟು ಶಿವಗಂಗೆ ಚಾರಣದ ಕೆಲವೊಂದು ಪೋಟೋಗಳು..
                                                ಕಠಿನ ಹಂತ ಆರಂಭಕ್ಕೆ ಮುನ್ನ...







                                            ನಂದಿ ಮೂರ್ತಿ ಕಲ್ಲಿನಿಂದ ಕಾಣುವ ಶಿವಗಂಗೆ ಊರು...
                                                             ಮುರಿದು ಹೋದ ಶಿಲ್ಪಕಲ್ಲು


                                                  ಒಂಟಿ ಕಲ್ಲಿನ ಮೇಲೆ ಕೆತ್ತಿದ ನಂದಿ ಮೂರ್ತಿ



                                            ಏದುಸಿರು ಬಿಡುತ್ತಾ ಕಲ್ಲು ಬೆಟ್ಟ ಹತ್ತುತ್ತಿರುವ ಜನರು
                                                      ಶಿವಗಂಗೆ ಬೆಟ್ಟದ ತುದಿಯಲ್ಲೊಂದು ಸೆಲ್ಪಿ...

             ರಾಜರ ಕಾಲದ ದ್ವಾರ ಹಾಗು ದೇವಸ್ಥಾನದ ಸುತ್ತು ಪೌಳಿ. ಈ ಸ್ಥಳ ಹಲವಾರು ಶಿಲ್ಪ ಕೆತ್ತನೆಗಳ ಭಂಡಾರ.

                                        ಬೆಟ್ಟದ ಅರ್ಧದಾರಿಯಿಂದ ಕಾಣುವ ಶಿವಗಂಗೆ ಊರಿನ ದೃಶ್ಯ
                                        ಬೆಳಗ್ಗಿನ ಚಳಿಗೆ ಮುದುಡಿ ಕೂತ ಕಪಿಗಳ ಹಿಂಡು

ಗಂಗಡಿಕಲ್ಲು ಕುದುರೆಮುಖದ ಹೆಮ್ಮ

ಪರಿಚಯ: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಒಂದು ಕಾಲದ ಜನಸಂದಣಿಯ ಟೌನ್ ಷಿಪ್, ಪಶ್ಚಿಮ ಘಟ್ಟದ ಪ್ರಸಿದ್ಧ ಗಿರಿಧಾಮ ಹಾಗು ವನ್ಯಧಾಮ.  ಮಂಗಳೂರಿನಿಂದ ಸುಮಾರು 100 ಕಿ.ಮೀ ಹಾಗು ಬೆಂಗಳೂರಿನಿಂದ ಸುಮಾರು 330 ಕಿ.ಮೀ ದೂರದಲ್ಲಿದೆ.
             ಗಂಗಡಿಕಲ್ಲು ಕುದುರೆಮುಖ ಪರ್ವತ ಶ್ರೇಣಿಯ ಸುಂದರವಾದ ಚಾರಣ ತಾಣಗಳಲ್ಲಿ ಒಂದು. ಇದು ಮಾಳ-ಕುದುರೆಮುಖ ರಸ್ತೆಗೆ ಅತೀ ಹತ್ತಿರದಲ್ಲೆ ಇರುವ ಚಾರಣ ಪ್ರದೇಶ. ಸಮುದ್ರ ಮಟ್ಟದಿಂದ ಸುಮಾರು 1455 ಮೀ ಎತ್ತರದ ಈ ಚಾರಣ ಪ್ರದೇಶ, ಗಂಗಡಿಕಲ್ಲನ್ನು ಚಾರಣಿಸಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಕುದುರೆಮುಖ ರಾಷ್ಟ್ರೀಯ ವನ್ಯಜೀವಿ ಧಾಮವನ್ನು ಸಂಪರ್ಕಿಸಿದಲ್ಲಿ ಅನುಮತಿ ಹಾಗು ಗೈಡ್ ವ್ಯವಸ್ಥೆ ಸಿಗುವುದು. 
         ಈ ಚಾರಣಕ್ಕೆ ಅಕ್ಟೋಬರ್, ನವೆಂಬರ್, ಡಿಸೆಂಬರ್ ಹಾಗು ಜನವರಿ  ತಿಂಗಳು ಪ್ರಸಕ್ತವಾದ ಸಮಯ. ಮಳೆಗಾಲದ ಅವಧಿಯಲ್ಲಿ ಚಾರಣಕ್ಕೆ ಅವಕಾಶವಿರುವುದಿಲ್ಲ.
            ವಿಶಿಷ್ಟ ಸಸ್ಯ ಪ್ರಭೇದಗಳು ಇಲ್ಲಿನ ವೈಶಿಷ್ಟ್ಯ. ಕುದುರೆಮುಖ ಪರ್ವತ ಶ್ರೇಣಿಯು ಶೋಲಾ ಕಾಡು, ಹುಲ್ಲುಗಾವಲಿನ ಬೆಟ್ಟಗಳಾದುದರಿಂದ ಇಲ್ಲಿ ಕಡವೆ, ಕಾಡುಕೋಣ,  ಕಾಡುಕುರಿ, ಸಿಂಗಳೀಕಗಳು ಸಾಮಾನ್ಯವಾಗಿ ಕಂಡುಬರುವ ಕಾಡುಪ್ರಾಣಿಗಳು.  ಪಶ್ಚಿಮಘಟ್ಟದ ವಿಶೇಷ ಮಂಗಟ್ಟಿಗಳ ಹಾಗು ಚಿಟ್ಟೆಗಳ ತವರು ಕುದುರೆಮುಖ. 
            ಅದೊಂದು ಆದಿತ್ಯವಾರ ಬೆಳ್ಳಂಬೆಳಗ್ಗೆ ಕುದುರೆಮುಖ ಶ್ರೇಣಿಯ ಗಂಗಡಿಕಲ್ಲು ಚಾರಣ ಕೈಗೊಳ್ಳಲು ನಮ್ಮ ಗುಂಪು ಜೊತೆ ಹೊಗಿದ್ದೆ. ಈ ಚಾರಣದ ಕೆಲವು ಕ್ಷಣಗಳನ್ನು ಪೋಟೋ ಸಹಿತ ಇಲ್ಲಿ ದಾಖಲಿಸಿದ್ದೇನೆ.

 ಮಾಳ-ಕುದುರೆಮುಖ ರಸ್ತೆಯಲ್ಲಿ ಮಂಜಿನ ತೆರೆಯಲ್ಲಿ ಮುಸುಕಿದ ಗಂಗಡಿಕಲ್ಲಿನ ದೃಶ್ಯ. ಈ ರಸ್ತೆಯಲ್ಲಿ ಬೆಳಗ್ಗೆ ಅಥವಾ ಸಂಜೆಯ ಅವಧಿಯಲ್ಲಿ ಬೈಕಿಂಗ್ ಮಾಡುವುದೇ ಒಂದು ಅಹ್ಲಾದಕರ ಅನುಭವ.
                                   ಗಣಪತಿ ದೇವಸ್ಥಾನ ಗಂಟೆ ಬಾಗಿಲಿನಿಂದ ಹಾಗೆ ಒಂದು ಕ್ಲಿಕ್

                                 ಸೂರ್ಯನನ್ನೆ ಆವರಿಸಿದ ಮಂಜು ಹಾಗು ಪಕ್ಕದಲ್ಲೊಮದು ಒಂಟಿ ಮರ.
                                                        ಚಾರಣದ ಆರಂಭದ ಕ್ಷಣಗಳು...

                                      ದೂರದ ಇಳಿಜಾರಿನಲ್ಲಿ ಹುಲ್ಲು ಮೇಯುತ್ತಿರುವ ಕಾಡು ಕುರಿಗಳು.
                                       ಇಲ್ಲಿ ವಿಶಿಷ್ಟ ಸಸ್ಯ ಹಾಗು ಕೀಟ ಪ್ರಭೇದಗಳನ್ನು ಕಾಣಬಹುದು.

                                 ಮೋಡಗಳು ದೇಹ ಹಾಗು ಮನಸ್ಸನ್ನು ಸ್ಪರ್ಶಿಸಿ ಹಿತಾನುಭವ ನೀಡುತ್ತದೆ.

                                  ಕಣ್ಣು ಎಟಕುವಷ್ಟೂ ದೂರ ಸುಂದರ ದೃಶ್ಯಗಳು ನೋಡುಗರಿಗೆ ಸಾಮಾನ್ಯ.
                 ಗಂಗಡಿಕಲ್ಲು ಹಾಗು ಕುದುರೆಮುಖ ಶ್ರೇಣಿಯ ಹಸಿರು ಆಹ್ಲಾದಕರ ಅನುಭವ ನೀಡುವುದು.


                                                    Back water of Lakhya Dam.






 ಬೆಟ್ಟದ ತುದಿಯಿಂದ ಸುಂದರವಾದ ಕುದುರೆಮುಖ ಪರ್ವತ ಶ್ರೇಣಿಯ ವಿಹಂಗಮನೋಟವನ್ನು ಕಾಣಬುಹುದು.

Friday, March 17, 2017

ಹಣತೆ ಗುಡ್ಡ - ಕ್ಯಾತನಮಕ್ಕಿಗೆ ಪಾದಚಾರಣ

          ಹಣತೆಗುಡ್ಡ ಏರಿ, ಕ್ಯಾತನಮಕ್ಕಿಯವರೆಗೆ ಶಿಖರ ಸಾಲುಗಳಲ್ಲಿ ಪಾದಾಚಾರಣ ಮಾಡುವುವ ನಮ್ಮ ಯೋಜನೆಯಂತೆ. ಹೊರನಾಡಿನಲ್ಲಿ ರಾತ್ರಿ ಕಳೆದು ಬೆಳಗ್ಗೆ  ಬೇಗ ಎದ್ದು ದೇವಸ್ಥಾನದ ಎದುರಿನ ಹೋಟೆಲ್ ನಲ್ಲಿ ಬಿಸಿ ಬಿಸಿ ಕಾಫಿಯನ್ನು ಹೀರಿ, ಹಣತೆಗುಡ್ಡದ ಬುಡವನ್ನು ಸೂರ್ಯ ಉದಯಿಸುವ ಸಮಯಕ್ಕೆ ತಲುಪಿ ಚಾರಣ ಆರಂಭಿಸಿದೆವು. 
          ಈ ಚಾರಣದ ಕೆಲವು ತುಣುಕುಗಳು ಪೋಟೋ ಸಹಿತ ದಾಖಲಿಸುತ್ತಿದ್ದೇನೆ.  

                               ದಾರಿಯಲ್ಲಿ ಕಂಡ ಕಾಡಿನ ಹುಂಜ. 
ಹಾದಿಯನ್ನು ಏರುವಾಗ ಕಂಡ ಮೋಡ ಮುಸುಕಿದ ಹೊರನಾಡು. ಮೋಡ ಸಾಗರವನ್ನು ಕಂಡಂತ ಅನುಭವ.

ಹಣತೆಗುಡ್ಡವನ್ನು ಏರಲು ದಾರಿ ಸಹಾಯ ನೀಡುತ್ತಿರುವ ಹಳ್ಳಿಯ ಹಿರಿಯ. ಕೊಯಿಲಾಗಲು ದಿನ ಲೆಕ್ಕ ಹಾಕುತ್ತಿರುವ ಗದ್ದೆಗಳು. 
 ನಮ್ಮ ಮೊದಲ ಗುರಿ 'ಹಣತೆ ಗುಡ್ಡ'. ಬಿಸಿಲಿನ ಜಳದಲ್ಲಿ, ಬೀಸುವ ತಂಗಾಳಿಯ ಮೈಯೊಡ್ಡಿ ಗುಡ್ಡ ಹತ್ತುವುದೇ ಖುಷಿ.
ಮುಂದಿನ ಗುರಿ ಕ್ಯಾತನಮಕ್ಕಿ ಬೆಟ್ಟ ಸಾಲುಗಳು, ಹಣತೆಗುಡ್ಡದ ತುದಿಯಿಂದ ಕಾಣುವ ದೃಶ್ಯ.
              ಹಣತೆಗುಡ್ಡದ ತುದಿಯಲ್ಲಿ ಏರಿಸಿದ ವಿಕ್ರಮ ಪತಾಕೆ.
                                          ಇಳಿಜಾರು ದಾರಿಯಿದು... 
   ಹಣತೆಗುಡ್ಡದ ತುದಿಯಿಂದ ಕಾಣುವ ಮಂಜು ಆವರಿಸಿದ ಮೇರುತಿ ಪರ್ವತ/ಕಾನ.
ಹಣತೆಗುಡ್ಡದ ತುದಿಯಲ್ಲಿ ವಿರಮಿಸುತ್ತಿರುವ ನಮ್ಮ ಟೀಮ್. ಗುಡ್ಡದ ತುದಿ ಹಣತೆಯಂತೆ ಇರುವ ಕಾರಣಕ್ಕೇನೋ ಈ ಹೆಸರು ಬಂದಿರಬೇಕು.
  ಹಣತೆಗುಡ್ಡದಿಂದ ಕ್ಯಾತನಮಕ್ಕಿ ಕಡೆಗೆ ಪಯಣ... 


          
       ಕಾಮತ್ ರವರ ಜೋಕ್ಗಳು ನಮ್ಮ ಚಾರಣದ ಪ್ಲಸ್ ಪಾಯಂಟ್... 

   ನಮ್ಮ  ಟೀಮ್, ಎಡದಿಂದ ಕಾಮತ್, ನಾನು, ದಯಾನಂದ್, ಮಹೇಶ್ ಮತ್ತು ಸುಧೀರ್




               ಪಶ್ಚಿಮ ಘಟ್ಟದ ಸಾಲಿನ ಮನಮೋಹಕ ನೋಟ.


 ಮೈಕಲ್ ಜಾಕ್ಸನ್ ಬೆರ್ಚಪ್ಪ ಜೊತೆ ಪೋಸ್ ಕೊಡುತ್ತಿರುವ ಸುಧೀರ್ ಮತ್ತು ಕ್ಲಿಕ್ಕಿಸುತ್ತಿರುವ ದಯಾ, ನನ್ನ ಕ್ಯಾಮರಾ ನೋಟಕ್ಕೆ ಸಿಕ್ಕಂತೆ..
ಹಿಂತಿರುಗಿ ಬರುವಾಗ ಗದ್ದೆಯಲ್ಲಿ ಕಂಡ ಮೈಕಲ್ ಜಾಕ್ಸನ್ ಬೆರ್ಚಪ್ಪ!


















ಒಂದು ಅದ್ಬುತವಾದ ಚಾರಣದ  ಅನುಭವ ಹೊತ್ತುಕೊಂಡು ಮನೆಗೆ ಸಾಗುವ ಹಾದಿಯಲ್ಲಿ ಕಂಡ ದೃಶ್ಯ.
            




ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...