ನಮ್ಮ ಬರವಣಿಗೆಗೆ ಮೂರ್ತ ಸ್ವರೂಪ ಸಿಗುವುದು ಪರವೂರಲ್ಲಿ ಬದುಕು ಸಾಗಿಸುವಾಗ ಹಾಗಂತ ನನ್ನ ಅನಿಸಿಕೆ.
ಬೆಂದಕಾಳೂರಿನ ಮತ್ತಿಕೆರೆಯಲ್ಲಿ ಮೊನ್ನೆ ರಾತ್ರಿ ಸಿಡಿಲು ಮಿಂಚಿನಿಂದ ಕೂಡಿದ ಸಾಧಾರಣ ಮಳೆ.
ನಮ್ಮೂರ ಕಡೆ ಭಾರಿ ಗಾಳಿ ಮಳೆ. ಬೆಳ್ಳಂ ಬೆಳಗ್ಗೆ ಮಕ್ಕಳೆಲ್ಲ ಮಾವಿನ ಮರದ ಕೆಳಗೆ.
ಮುಂಗಾರು ಆರಂಭದ ದಿನಗಳು ನೆನಪಿಸುವುದು ನನ್ನ ಅಜ್ಜಿ ಮನೆಯಲ್ಲಿ ಬೇಸಿಗೆ ರಜೆಯಲ್ಲಿ ಕಳೆದ ದಿನಗಳನ್ನು. ಈಗಿನ ಹಾಗೆ ನಮ್ಮ ಶಾಲೆಯ ದಿನಗಳು ಸ್ಪರ್ಧಾತ್ಮಕವಾಗಿರಲಿಲ್ಲ. ಯಾವುದೇ ಕೋಚಿಂಗ್, ಶಿಬಿರಗಳಿಂದ ಮುಕ್ತವಾಗಿ ಇದ್ದವರು. ಆ ವಿಷಯದಲ್ಲಿ ನಾನು, ನನ್ನ ಓರಗೆಯವರು ಪುಣ್ಯಾಶಾಲಿಗಳು.
ಗಾಳಿ ಮಳೆ ಬೀಸಿದ ರಾತ್ರಿಯಲ್ಲಿ ನಾವು ಖುಷಿಯಿಂದ ಬೆಳಗಾಗುವುದನ್ನು ಕಾಯುತ್ತಿದ್ದೆವು. ಎದ್ದು ಮುಖ ತೋಳೆಯದೆ ಓಡುವುದು ಕಾಟು ಮಾವಿನ ಮರದ ಕೆಳಗೆ.
ಹೀಗೆ ನೆನ್ನೆ ರಾತ್ರಿ ಸುರಿದ ಮಳೆಯ ಜೊತೆ ನನ್ನ ಬಾಲ್ಯವನ್ನು ನೆನಪಿಸಿಕೊಂಡೆ.
Friday, May 19, 2017
ಮತ್ತಿಕೆರೆಯಲ್ಲಿ ಬೀಸಿದ ಮಳೆಗೆ...
Wednesday, May 3, 2017
ತಿರುಗಾಟದ ಚಿತ್ರಗಳು-20
ಮುಲ್ಕಾಜೆಮಾಡದಲ್ಲಿ ಮೋಡ ಕವಿದ ಒಂದು ಸಂಜೆ. ಜೋರು ಮಳೆಯಾಗಬಹುದೆಂದು ಆಸೆಯಲ್ಲಿ ಕಾದರೆ, ಬೀಸಿದ ಬಿರುಗಾಳಿಗೆ ಓಟಕ್ಕಿತ್ತ ಮೋಡಗಳು. ಆಸೆಯ ಭಾವಕೆ ನಿರಾಸೆಯ ಏಟು.
Subscribe to:
Posts (Atom)
ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.
ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...
-
ಪರಿಚಯ: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಒಂದು ಕಾಲದ ಜನಸಂದಣಿಯ ಟೌನ್ ಷಿಪ್, ಪಶ್ಚಿಮ ಘಟ್ಟದ ಪ್ರಸಿದ್ಧ ಗಿರಿಧಾಮ ಹಾಗು ವನ್ಯಧಾಮ. ಮಂಗಳೂರಿನಿಂದ ಸುಮಾರು 100 ಕಿ...
-
ಹಣತೆಗುಡ್ಡ ಏರಿ, ಕ್ಯಾತನಮಕ್ಕಿಯವರೆಗೆ ಶಿಖರ ಸಾಲುಗಳಲ್ಲಿ ಪಾದಾಚಾರಣ ಮಾಡುವುವ ನಮ್ಮ ಯೋಜನೆಯಂತೆ. ಹೊರನಾಡಿನಲ್ಲಿ ರಾತ್ರಿ ಕಳೆದು ಬೆಳಗ್ಗೆ ಬೇಗ ಎದ್ದು ದ...
-
ಪರಿಚಯ: ಶಿವಗಂಗೆ ನಗರ ಚಾರಣಿಗರ ಹತ್ತಿರದ ಚಾರಣ ಸ್ಥಳ. ಬೆಂಗಳೂರು-ತುಮಕೂರು ರಸ್ತೆಯ ದಾಬಾಸ್ ಪೇಟೆಯಲ್ಲಿದೆ. ಬೆಂಗಳೂರಿನಿಂದ ಸುಮಾರು 55 ಕಿ.ಮೀ ಹಾಗು ತುಮಕೂರಿನಿಂದ...