Friday, May 19, 2017

ಮತ್ತಿಕೆರೆಯಲ್ಲಿ ಬೀಸಿದ ಮಳೆಗೆ...

ನಮ್ಮ ಬರವಣಿಗೆಗೆ ಮೂರ್ತ ಸ್ವರೂಪ ಸಿಗುವುದು ಪರವೂರಲ್ಲಿ ಬದುಕು ಸಾಗಿಸುವಾಗ ಹಾಗಂತ ನನ್ನ ಅನಿಸಿಕೆ.
ಬೆಂದಕಾಳೂರಿನ ಮತ್ತಿಕೆರೆಯಲ್ಲಿ ಮೊನ್ನೆ ರಾತ್ರಿ ಸಿಡಿಲು ಮಿಂಚಿನಿಂದ ಕೂಡಿದ ಸಾಧಾರಣ ಮಳೆ.
ನಮ್ಮೂರ ಕಡೆ ಭಾರಿ ಗಾಳಿ ಮಳೆ. ಬೆಳ್ಳಂ ಬೆಳಗ್ಗೆ  ಮಕ್ಕಳೆಲ್ಲ ಮಾವಿನ ಮರದ ಕೆಳಗೆ.
ಮುಂಗಾರು ಆರಂಭದ ದಿನಗಳು ನೆನಪಿಸುವುದು ನನ್ನ ಅಜ್ಜಿ ಮನೆಯಲ್ಲಿ ಬೇಸಿಗೆ ರಜೆಯಲ್ಲಿ ಕಳೆದ ದಿನಗಳನ್ನು. ಈಗಿನ ಹಾಗೆ ನಮ್ಮ ಶಾಲೆಯ ದಿನಗಳು ಸ್ಪರ್ಧಾತ್ಮಕವಾಗಿರಲಿಲ್ಲ. ಯಾವುದೇ ಕೋಚಿಂಗ್, ಶಿಬಿರಗಳಿಂದ ಮುಕ್ತವಾಗಿ ಇದ್ದವರು.  ‌ಆ ವಿಷಯದಲ್ಲಿ ನಾನು, ನನ್ನ ಓರಗೆಯವರು ಪುಣ್ಯಾಶಾಲಿಗಳು.
ಗಾಳಿ ಮಳೆ ಬೀಸಿದ ರಾತ್ರಿಯಲ್ಲಿ ನಾವು ಖುಷಿಯಿಂದ ಬೆಳಗಾಗುವುದನ್ನು ಕಾಯುತ್ತಿದ್ದೆವು. ಎದ್ದು ಮುಖ ತೋಳೆಯದೆ ಓಡುವುದು ಕಾಟು ಮಾವಿನ ಮರದ ಕೆಳಗೆ.
ಹೀಗೆ ನೆನ್ನೆ ರಾತ್ರಿ  ಸುರಿದ ಮಳೆಯ ಜೊತೆ ನನ್ನ ಬಾಲ್ಯವನ್ನು ನೆನಪಿಸಿಕೊಂಡೆ.

No comments:

Post a Comment

ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...