Friday, March 17, 2017

ದೇವರಮನೆಯಿಂದ ಹೊರಟ್ಟಿ


ಈ ವಾರಾಂತ್ಯ ಚಾರಣದಲ್ಲಿ ದೇವರಮನೆ ಹಾಗು ಹೊರಟ್ಟಿಯನ್ನು ಸುತ್ತಾಡಿಕೊಂಡು ಬರಲು ಹೋದಾಗ ಕಂಡ ದೃಶ್ಯಗಳು. ಬೆಂಕಿ ಬಿದ್ದು ಸುಟ್ಟು ಹೋದ ಬೆಟ್ಟ ಗುಡ್ಡಗಳು, ಉರಿಯುತ್ತಿರುವ ಗುಡ್ಡಗಳು,  ನೀರಿನ ಹರಿವಿಲ್ಲದೆ ಒಣಗಿ ನಿಂತ ಹಳ್ಳಗಳು, ಬಿಸಿಲ ಝರಿ... ಇದು ಈಗಿನ ನಮ್ಮ ಘಟ್ಟದ ಬೆಟ್ಟಗಳ ಕಥೆ. ಇದರ ಕೆಲವು ತುಣುಕುಗಳನ್ನು ಇದೋ  ನಿಮ್ಮ ಮುಂದೆ  ಪೋಟೋ ಸಹಿತ ದಾಖಲಿಸುತ್ತಿದ್ದೇನೆ.

ಬೆಳ್ಳಂ ಬೆಳಕಿನಲಿ ಸಾಗರದಂತೆ ಮುಸುಕಿದ ಮಂಜು. ಗರಿಗೆದರಿದ ಸೂರ್ಯ... ನೋಡುವ  ಕಣ್ಮನಗಳಿಗೆ ಚಂದದ ನೋಟ.


                                                                     

                     













 ಮಂಜಿನ ಚಾದರಹೊದ್ದ ಬೆಟ್ಟಗಳ ಸಾಲಿನಲಿ ಕಾಣುತಿರುವ ಜೇನುಕಲ್ಲು ಹಾಗು ದೀಪದಕಲ್ಲು ಬೆಟ್ಟಗಳು.
  ಕಣಿವೆಗಳೊಳಗೆ ಬೆಳಕ ಚೆಲ್ಲುತ್ತಿರುವ ಸೂರ್ಯ... ಕತ್ತಲಿನಿಂದ ಬೆಳಕಿನಡೆಗೆ.





                                                  









ದೇವರಮನೆಯ ದೂರದ ನೋಟ.
ಹೊರಟ್ಟಿ ಪ್ರದೇಶವು ಆನೆಗಳ ಕಾರಿಡಾರ್. ವಿಶಿಷ್ಟ ಪಕ್ಷಿ ಪ್ರಭೇದಗಳು ಕಾಣಲು ಸಿಗುತ್ತದೆ. 
 ಬೆಂಕಿ ಬಿದ್ದೋ/ಕೊಟ್ಟೋ ಸುಟ್ಟು ಹೋದ ಹೊರಟ್ಟಿಯ ಸುತ್ತಲಿನ ಬೆಟ್ಟಗಳು... 

Thursday, January 16, 2014

ಮೈದಾಡಿ - ಪಶ್ಚಿಮಘಟ್ಟದ ಸ್ವರ್ಗ

ಪಶ್ಚಿಮ ಘಟ್ಟ ಸಾಲುಗಳೇ ಹಾಗೆ, ಮಳೆಯಿರಲಿ, ಚಳಿಯಿರಲಿ ಅಥವಾ ಬಿಸಿಲೇ ಇರಲಿ... ಚಾರಣಿಗರ ಸ್ವರ್ಗ ಅದು. ಇದೊಂದು ಮಳೆಕಾಲದ ದಿನ ನಾನು ನನ್ನ ಗೆಳೆಯ, ಕುದುರೆ ಮುಖ ವಲಯದ ಮಳೆಯ ಸೌಂದರ್ಯವನ್ನು ಆಸ್ವಾದಿಸಲು ಬೈಕ್ ನಲ್ಲಿ ಹೊರಟೆ ಬಿಟ್ಟೆವು. ನಮ್ಮ ಗುರಿ ಮೈದಾಡಿ. ನಾವು ಆರಿಸಿದ ದಾರಿ ಬಜಗೋಳಿ ಮೂಲಕ ಮೈದಾಡಿಯನ್ನು ತಲುಪುವುದು.
ಅದೊಂದು ಅಮೋಘ ಬೈಕಿಂಗ್. ತರಗುಟ್ಟುವ ಚಳಿ ಮಳೆಯಲ್ಲಿ ಬೈಕಿಂಗ್ ಹೋಗುವುದೆ ಸೂಪರ್... ನೀವೊಮ್ಮೆ ಹೀಗೆ ಮಜಾ ಅನುಭವಿಸಿ... ಅವಿಸ್ಮರಣಿಯ ಅನುಭವಗಳ.
 ದಾರಿಯಲ್ಲಿ ತೆಗೆದ ಕೆಲವೊಂದು ಚಿತ್ರಗಳು ನಿಮಗಾಗಿ...
ಮಳೆಗಾಲದಲ್ಲಿ ಮೈದುಂಬಿ ರಭಸದಿಂದ ಹಾಲ್ನೊರೆಯುಕ್ಕುತಾ
ದುಮ್ಮಿಕ್ಕುವ ಜಲಧಾರೆಗಳು ಮನಮೋಹಕ. 
ಬೈಕ್ ನ ಹ್ಯಾಂಡಲ್ ಏರಿ ಸೌಂದರ್ಯ ನೋಡ ಹೊರಟ ಕೋತಿ ರಾಜ.
ಸೌಂದರ್ಯದಲ್ಲಿ ನಿಮಗೇನು ಕಮ್ಮಿ ನಾ... ಸ್ವಲ್ಪ ಮೇಕಪ್ ಮಾಡ್ಕೊಂಡ್ರೆ ಚೆನ್ನಾಗಿರತ್ತಲ್ವ?
ಮೋಹಕ ಮೈದಾಡಿ


ಮೋಡಗಳ ಮೈದುಂಬಿಕೊಂಡ ಮೈದಾಡಿ, ಅವಿಸ್ಮರಣೀಯ ಚಿತ್ರಗಳು ಕಣ್ತುಂಬ. ಮೋಗೆದಷ್ಟು ಮೊಗ ತುಂಬಾ
ರಾಚುವ ಮೋಡಗಳ ರಾಶಿ.






ಮೈದಾಡಿಯಿಂದ ದೂರದಲ್ಲಿ ಕಾಣುವ ಮೋಡದ ರಾಶಿಯೋಳಗಿನ ಜಮಾಲಬಾದ್ ಕೋಟೆ











ಕುಮಾರ ಪರ್ವತಕ್ಕೊಂದು ಸುತ್ತು

ಅನೇಕ ದಿನಗಳ ಆಸೆ ಈಡೇರಿದೆ, ಕರ್ನಾಟಕದ ಮೂರು ಎತ್ತರಗಳನ್ನು ಮುಟ್ಟಿದ ಸಂತೋಷದಲ್ಲಿದ್ದೇನೆ. ಆದರೆ ಮೂರನೇಯ ಪರ್ವತ ಚಾರಣವು ನನ್ನ ಸುಸ್ತು ಮಾಡಿಬಿಟ್ಟಿತು. ಕುಮಾರ ಪರ್ವತದ ಚಾರಣ ತುಂಬಾ ಕಷ್ಟಕರವಾದ ಚಾರಣ. 
ಭಟ್ರ ಮನೆಯ ದಾರಿಯಿಂದ ಕಾಣುತ್ತಿರುವ ಭತ್ತದರಾಶಿ ಪರ್ವತ
ಭತ್ತದ ರಾಶಿ ಪರ್ವತ ಕಾಣುವುದು ಹೀಗೆ...



ರಾತ್ರಿಯ ಭೋಜನ ಸಮಯಕ್ಕೆ ಮ್ಯಾಗಿ.

ಕುಮಾರಪರ್ವತದಲ್ಲಿ ಕಂಡ ಸೂರ್ಯೋದಯ..


                                                      ಬೆಳಕಲ್ಲಿ ಕಂಡ ಶೇಷ ಪರ್ವತ




ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...