Saturday, October 21, 2017

Monday, September 18, 2017

ಬೈಕಿಂಗ್ ಮತ್ತು ಆವಲಬೆಟ್ಟ ಚಾರಣ

ಬೆಂಗಳೂರು ನಗರದಿಂದ ಸುಮಾರು 90 ಕಿ.ಮೀ ದೂರವಿರುವ ಚಿಕ್ಕ ಬಳ್ಳಾಪುರ ದ ಹತ್ತಿರ ಇರುವ ಪ್ರೇಕ್ಷಣಿಯ ಸ್ಥಳ ಆವಲ ಬೆಟ್ಟ. ಬೈಕಿಂಗ್ ಹಾಗೂ ಚಾರಣಕ್ಕೆ ಒಳ್ಳೆಯ ಆಯ್ಕೆ. ನಾವು ಹೊರಟ ದಿನ ಬೆಳಿಗ್ಗೆ ತುಂಬಾ ಜೋರಾಗಿ ಮಳೆ ಸುರಿದಿತ್ತು. ಮಳೆಯಲ್ಲಿ ದೂರ ದಾರಿ ಬೈಕ್ ಓಡಿಸುವುದು ನನಗೆ ಖುಷಿ.  
ಚಿಕ್ಕ ಬಳ್ಳಾಪುರ ರಸ್ತೆಯಲ್ಲಿ ಹೊರಟ ನಾವು ದೇವನಹಳ್ಳಿಯಲ್ಲಿ ಬೆಳಗ್ಗಿನ ಉಪಹಾರ ಸೇವಿಸಿ ಪಯಣ ಮುಂದುವರೆಸಿದೆವು. 


 
ಬೆಟ್ಟದ  ಮೇಲೆ ಇರುವ ಶ್ರೀ ಧೇನು ಲಕ್ಷ್ಮೀ ನರಸಿಂಹ ದೇವಸ್ಥಾನ.
 
 ಬೆಟ್ಟದ ತುದಿಯಿಂದ ಕಾಣುವ ವಿಹಂಗಮ ನೋಟ.







ವಾಪಾಸು ಹೊರಟ ನಾವು ದೇವನಹಳ್ಳಿಯಲ್ಲಿ ಊಟ ಮಾಡಿ ಬೆಂಗಳೂರಿಗೆ ಬರುತ್ತ ಧಾರಾಕಾರ ಗಾಳಿ ಮಳೆ. ಮಳೆಯಲ್ಲಿ ಮನೆ ಸೇರಿದೆ.

Monday, July 24, 2017

ತಿರುಗಾಟದ ಚಿತ್ರಗಳು-23

ಬೆಂಗಳೂರಿನ ತಿರುಗಾಟದಲ್ಲಿ ಮೊದಲು ತುಮಕೂರಿನ ಮೈದಾನಹಳ್ಳಿಯ ಜಯಮಂಗಲಿ ಕೃಷ್ಣ  ಮೃಗ ಸಂರಕ್ಷಿತಾ ಪ್ರದೇಶ, ಮಧುಗಿರಿ ಕೋಟೆ ಹಾಗು ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಗೋರವನಹಳ್ಳಿಯನ್ನು ಸಂದರ್ಶಿಸಿದೆ.

Monday, June 26, 2017

ತಿರುಗಾಟದ ಚಿತ್ರಗಳು-22

ಕಾಂಕ್ರೀಟ್ ಕಾಡಿನಲ್ಲಿ ಮಳೆ ಬಿತ್ತನೆಗೆ ಕ್ಷಣಗಣನೆ.

Sunday, June 18, 2017

ತಿರುಗಾಟದ ಚಿತ್ರಗಳು-21

ಊರಿಗೆ ರೈಲಿನಲ್ಲಿ ಹೋದಾಗ ಕ್ಲಿಕ್ಕಿಸಿದ ಚಿತ್ರ.

Friday, May 19, 2017

ಮತ್ತಿಕೆರೆಯಲ್ಲಿ ಬೀಸಿದ ಮಳೆಗೆ...

ನಮ್ಮ ಬರವಣಿಗೆಗೆ ಮೂರ್ತ ಸ್ವರೂಪ ಸಿಗುವುದು ಪರವೂರಲ್ಲಿ ಬದುಕು ಸಾಗಿಸುವಾಗ ಹಾಗಂತ ನನ್ನ ಅನಿಸಿಕೆ.
ಬೆಂದಕಾಳೂರಿನ ಮತ್ತಿಕೆರೆಯಲ್ಲಿ ಮೊನ್ನೆ ರಾತ್ರಿ ಸಿಡಿಲು ಮಿಂಚಿನಿಂದ ಕೂಡಿದ ಸಾಧಾರಣ ಮಳೆ.
ನಮ್ಮೂರ ಕಡೆ ಭಾರಿ ಗಾಳಿ ಮಳೆ. ಬೆಳ್ಳಂ ಬೆಳಗ್ಗೆ  ಮಕ್ಕಳೆಲ್ಲ ಮಾವಿನ ಮರದ ಕೆಳಗೆ.
ಮುಂಗಾರು ಆರಂಭದ ದಿನಗಳು ನೆನಪಿಸುವುದು ನನ್ನ ಅಜ್ಜಿ ಮನೆಯಲ್ಲಿ ಬೇಸಿಗೆ ರಜೆಯಲ್ಲಿ ಕಳೆದ ದಿನಗಳನ್ನು. ಈಗಿನ ಹಾಗೆ ನಮ್ಮ ಶಾಲೆಯ ದಿನಗಳು ಸ್ಪರ್ಧಾತ್ಮಕವಾಗಿರಲಿಲ್ಲ. ಯಾವುದೇ ಕೋಚಿಂಗ್, ಶಿಬಿರಗಳಿಂದ ಮುಕ್ತವಾಗಿ ಇದ್ದವರು.  ‌ಆ ವಿಷಯದಲ್ಲಿ ನಾನು, ನನ್ನ ಓರಗೆಯವರು ಪುಣ್ಯಾಶಾಲಿಗಳು.
ಗಾಳಿ ಮಳೆ ಬೀಸಿದ ರಾತ್ರಿಯಲ್ಲಿ ನಾವು ಖುಷಿಯಿಂದ ಬೆಳಗಾಗುವುದನ್ನು ಕಾಯುತ್ತಿದ್ದೆವು. ಎದ್ದು ಮುಖ ತೋಳೆಯದೆ ಓಡುವುದು ಕಾಟು ಮಾವಿನ ಮರದ ಕೆಳಗೆ.
ಹೀಗೆ ನೆನ್ನೆ ರಾತ್ರಿ  ಸುರಿದ ಮಳೆಯ ಜೊತೆ ನನ್ನ ಬಾಲ್ಯವನ್ನು ನೆನಪಿಸಿಕೊಂಡೆ.

Wednesday, May 3, 2017

ತಿರುಗಾಟದ ಚಿತ್ರಗಳು-20

ಮುಲ್ಕಾಜೆಮಾಡದಲ್ಲಿ ಮೋಡ ಕವಿದ ಒಂದು ಸಂಜೆ. ಜೋರು ಮಳೆಯಾಗಬಹುದೆಂದು ಆಸೆಯಲ್ಲಿ ಕಾದರೆ, ಬೀಸಿದ ಬಿರುಗಾಳಿಗೆ ಓಟಕ್ಕಿತ್ತ ಮೋಡಗಳು. ಆಸೆಯ ಭಾವಕೆ ನಿರಾಸೆಯ ಏಟು.

Thursday, April 20, 2017

ತಿರುಗಾಟದ ಚಿತ್ರಗಳು-19

ಜೆ.ಪಿ ಪಾರ್ಕ್ ನಲ್ಲಿ ನೇರಳೆ ಬಣ್ಣದ ಹೂ ಬಿಟ್ಟ ಮರ.

Sunday, April 16, 2017

ತಿರುಗಾಟದ ಚಿತ್ರಗಳು-18

ಕುಂದಾದ್ರಿ ಬೆಟ್ಟ
 ಶ್ರೀ ಋಷ್ಯಶೃಂಗೇಶ್ವರ ದೇವಸ್ಥಾನ, ಕಿಗ್ಗ 

ತಿರುಗಾಟದ ಚಿತ್ರಗಳು-17

ಮಳೆಗಾಲ ಕಳೆದಾಗಿನ ಜಲಪಾತ.


ಒಂದು ವಾರಾಂತ್ಯದ ಸುತ್ತಾಟದ ಬಗ್ಗೆ.

ಜುಲೈ ತಿಂಗಳ ಒಂದು ವಾರಾಂತ್ಯ ಗೆಳೆಯರ ಜೊತೆ ಸೇರಿ ಬೆಂಗಳೂರಿನಿಂದ ತಲಕಾಡು, ಬಿಳಿಗಿರಿರಂಗನಬೆಟ್ಟ, ಚಾಮರಾಜನಗರ, ಗುಂಡ್ಲುಪೇಟೆ, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗು ಬಂ...